ಜಿಲ್ಲಾ ಸುದ್ದಿ

ಅಪರೂಪದ ವೀರಗಲ್ಲು ಪತ್ತೆ

Shilpa D

ಮೈಸೂರು: ತಾಲೂಕಿನ ಜಯಪುರದಲ್ಲಿ ಎಚ್.ಡಿ. ಕೋಟೆಗೆ ಹೋಗುವ ಮುಖ್ಯ ರಸ್ತೆಯ ಬಲಭಾಗದಲ್ಲಿರುವ ಗುಜ್ಜಾರಮ್ಮ ದೇಗುಲ ಆವರಣದಲ್ಲಿ ಕರ್ನಾಟಕದಲ್ಲೇ ಅಪರೂಪದ ದೋಣಿ ಇರುವ ವೀರಗಲ್ಲು ಪತ್ತೆಯಾಗಿದೆ.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್.ಜಿ. ರಾಮದಾಸ ರೆಡ್ಡಿ ಅವರು ಎನ್‍ಎಸ್‍ಎಸ್ ತಂಡದೊಂದಿಗೆ ಕ್ಷೇತ್ರ ಕಾರ್ಯ ಮಾಡಿ ಇದನ್ನು ಪತ್ತೆ ಹಚ್ಚಿದ್ದಾರೆ. ದೇಗುಲ ಆವರಣದಲ್ಲಿ 55 ವೀರಗಲ್ಲು, ಮಾಸ್ತಿಕಲ್ಲುಗಳಿದ್ದು, ಅವುಗಳಲ್ಲಿ ಒಂದಾದ ಅಪರೂಪದ ದೋಣಿ ಇರುವ ವೀರಗಲ್ಲು ಹಸಿರು ಗ್ರಾನೈಟ್ ಕಲ್ಲಿನಲ್ಲಿದೆ.ಎತ್ತರ 90 ಸೆಂ.ಮೀ, ಅಗಲ 30 ಸೆಂ.ಮೀ ಇದೆ.

ಇದು ಎರಡು ಹಂತಗಳಲ್ಲಿದ್ದು, ಒಂದನೇ ಹಂತದಲ್ಲಿ ದೋಣಿಯಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಕಾಳಗ ಚಿತ್ರವಿದೆ. ಎರಡನೇ ಹಂತದಲ್ಲಿ  ಕೃಷ್ಣನ ರೀತಿಯ ಕೊಳಲನೂದುವ ವ್ಯಕ್ತಿಯನ್ನು ಚಿತ್ರಿಸಲಾಗಿದೆ. ಶಿಲ್ಪ ಶೈಲಿ ಗಮನಿಸಿದಾಗ ಸುಮಾರು 14-15 ನೇ ಶತಮಾನದ ವೀರಗಲ್ಲಾಗಿದೆ.  

ದೋಣಿಯಲ್ಲಿರುವ ವ್ಯಕ್ತಿ ಕಡಲ್ಗಳ್ಳನ (ಕಳ್ಳ) ? ನ ಜೊತೆ ಹೋರಾಡಿ ವೀರ ಮರಣ ಹೊಂದಿರಬೇಕು. ವೈಷ್ಣವ ಧರ್ಮದ ಮೇಲೆ ಬೆಳಕು ಚೆಲ್ಲುವ ವಿಶೇಷ ವೀರಗಲ್ಲಾಗಿದೆ

SCROLL FOR NEXT