(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಕ್ಷಮೆಕೋರಿ ಮನೆಯೊಡತಿಯ ಮನಗೆದ್ದು: ಚಿನ್ನ ಕದ್ದು ಸೆರೆಸಿಕ್ಕಳು

ಆಕೆ ವೃತ್ತಿಪರ ಕಳ್ಳಿ. ಆಕೆಯ ಮೇಲೆ ಕೊಲೆ ಆರೋಪವು ಇದೆ. ಆದರೆ, ಆಕೆಯ ಪೂರ್ವಪರ ಪರಿಶೀಲನೆ ನಡೆಸದೆ ಮನೆ ಮಾಲೀಕರೊಬ್ಬರು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ತನ್ನ ಬುದ್ಧಿ ಬಿಡದ ಆಕೆ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು...

ಓಲೆ ಕದ್ದರೂ ಕ್ಷಮಿಸಿದ್ದ ಮನೆಯ ಮಾಲೀಕರಿಗೆ ಕಾಫಿಯಲ್ಲಿ ನಿದ್ರೆ ಮಾತ್ರೆ ಬೆರೆಸಿ ದರೋಡೆ ಮಾಡಿದ್ದ ಖತರ್ನಾಕ್ ಕಳ್ಳಿ ಈಗ ಪೊಲೀಸರ ವಶದಲ್ಲಿ

ಬೆಂಗಳೂರು:
ಆಕೆ ವೃತ್ತಿಪರ ಕಳ್ಳಿ. ಆಕೆಯ ಮೇಲೆ ಕೊಲೆ ಆರೋಪವು ಇದೆ. ಆದರೆ, ಆಕೆಯ ಪೂರ್ವಪರ ಪರಿಶೀಲನೆ ನಡೆಸದೆ ಮನೆ ಮಾಲೀಕರೊಬ್ಬರು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ತನ್ನ ಬುದ್ಧಿ ಬಿಡದ ಆಕೆ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಆಭರಣ ಕದ್ದು ಪರಾರಿಯಾಗಿದ್ದಳು. ಆದರೆ, ತಾನಾಗಿಯೇ ವಾಪಸ್ ಮನೆ ಮಾಲೀಕರ ಬಳಿ ತೆರಳಿ ಕದ್ದೊಯ್ದಿದ್ದ ಒಡವೆ ವಾಪಸ್ ಕೊಟ್ಟು ತಪ್ಪಾಗಿದೆ ಎಂದು ಕ್ಷಮೆ ಕೋರಿದ್ದಳು.

ಕಳ್ಳಿಯನ್ನು ಕ್ಷಮಿಸಿದ ಮನೆ ಮಾಲೀಕರು ಆಕೆಗೆ ಕೆಲಸ ಕೊಟ್ಟಿದ್ದರು. ಮೊದಲು ಬರಿ 10 ಗ್ರಾಂ ಚಿನ್ನಾಭರಣ ದೋಚಿದ್ದ ಆಕೆ, ಎರಡನೇ ಬಾರಿ ಮನೆಯ ಎಲ್ಲ ಸದಸ್ಯರಿಗೆ ನಿದ್ರೆ ಮಾತ್ರೆ ಬೆರೆಸಿದ ಕಾಫಿ ನೀಡಿ ಬರೋಬ್ಬರಿ ರು.10 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದೊಯ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ತಮಿಳುನಾಡಿನ ನಾಗಪಟ್ಟಿನಂ ಗ್ರಾಮದ ಕೆ. ಕಾತ್ಯಾಯಿನಿ ಅಲಿಯಾಸ್ ಜನನಿ (39) ಬಂಧಿತೆ. ಕದ್ದ ಒಡವೆಗಳ ವಿಲೇವಾರಿಗೆ ಸಹಕರಿಸಿದ್ದ ಆಕೆಯ ಪ್ರಿಯಕರ ತೋಪಿಕ್ ಅಲಿಯಾಸ್ ಸಾಹುಲ್ ಹಮೀದ್ (21) ಎಂಬಾತನನ್ನು ಬಂಧಿಸಲಾಗಿದೆ.ಆರೋಪಿಗಳಿಂದ ರು.9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಪ್ರಕರಣದ ವಿವರ:
ಗಾಯತ್ರಿನಗರ 8ನೇ ಅಡ್ಡರಸ್ತೆಯಲ್ಲಿ ಸಿವಿಲ್ ಗುತ್ತಿಗೆದಾರ ಎಲ್.ಎನ್. ಕಾಂತಿ ಅವರ ಮನೆಯಲ್ಲಿ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡ ಕಾತ್ಯಾಯಿನಿ ಚೆನ್ನಾಗಿ ಕೆಲಸ ಮಾಡಿ ವಿಶ್ವಾಸ ಸಂಪಾದಿಸಿದ್ದಳು. ಆದರೆ, ಕೆಲಸಕ್ಕೆ ಸೇರಿದ ಎರಡೇ ತಿಂಗಳಲ್ಲಿ 10 ಗ್ರಾಂನ ಚಿನ್ನದ ಓಲೆಗಳನ್ನು ಕದ್ದಿದ್ದಳು.

ಈ ಬಗ್ಗೆ ಕಾಂತಿ ಯಾವುದೇ ದೂರು ಕೊಟ್ಟಿರಲಿಲ್ಲ. ಆದರೆ, ಕಾಂತಿ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳವು ಮಾಡುವ ಸಂಚು ಸಂಚು ರೂಪಿಸಿದ್ದ ಕಾತ್ಯಾಯಿನಿ, ಕದ್ದಿದ್ದ ಒಡವೆಗಳನ್ನು ಹಿಂದಿರುಗಿಸುವ ನೆಪದಲ್ಲಿ ಅ.7ರ ರಾತ್ರಿ ಮತ್ತೆ ಅವರ ಮನೆ ಹತ್ತಿರ ಬಂದಿದ್ದಳು. ಆಕೆಯಿಂದ ಓಲೆಗಳನ್ನು ಪಡೆದು ಕೊಂಡ ಕಾಂತಿ ಪತ್ನಿ, ನೀನು ಕೆಲಸಕ್ಕೆ ಬರುವುದು ಬೇಡ ಎಂದಿದ್ದರು. ಆದರೆ, ತನ್ನನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕಾತ್ಯಾಯಿನಿ, ಸುರಿಯುತ್ತಿದ್ದ ಮಳೆಯಲ್ಲೇ ರಾತ್ರಿ 12 ಗಂಟೆತನಕ ಮನೆ ಎದುರು ಕುಳಿತಿದ್ದಳು. ಕಾತ್ಯಾಯಿನಿಯ ಮಾತು ನಂಬಿದ ಕಾಂತಿ ಕುಟುಂಬ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿತ್ತು.

ಮರುದಿನ ಬೆಳಗ್ಗೆ ಏಳು ಗಂಟೆಗೆ ಎದ್ದು ಕಾಫಿ ಮಾಡಿ ಅದರಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ, ಕಾಂತಿ, ಅವರ ಪತ್ನಿ, ಮಗ ಹಾಗೂ ಅತ್ತೆಗೆ ಕೊಟ್ಟಿದ್ದಳು. ಆ ಕಾಪಿs ಕುಡಿದ ಸ್ವಲ್ಪ ಹೊತ್ತಿನಲ್ಲೇ ಎಲ್ಲರೂ ಪ್ರಜ್ಞೆ ತಪ್ಪಿದ್ದರು. ಕೂಡಲೇ ಬೀರುವಿನಲ್ಲಿದ್ದ 350 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಳು. ಕೆಲ ಹೊತ್ತಿನ ಬಳಿಕ ಕುಟುಂಬ ಸದಸ್ಯರು ಎಚ್ಚರಗೊಂಡಾಗ ಮನೆಗೆಲಸದಾಕೆಯ ಕೃತ್ಯ ಗೊತ್ತಾಗಿತ್ತು. ನಂತರ ಸುಬ್ರಹ್ಮಣ್ಯನಗರ ಠಾಣೆಗೆ ದೂರು ಕೊಟ್ಟರು.

ಆಪರೇಶನ್ ಸಕ್ಸಸ್: ಕಾತ್ಯಾಯಿನಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಆಕೆಯ ಪೂರ್ವಪರ ಮಾಹಿತಿಯನ್ನು ಕಾಂತಿ ಕುಟುಂಬ ಪಡೆದಿರಲಿಲ್ಲ. ಆದರೆ, ಆಕೆ ಮೊದಲ ಬಾರಿಗೆ ಮನೆಗೆಲಸಕ್ಕೆ ಬಂದಾಗ ಮೊಬೈಲ್ ಫೋನ್ ಬಳಸುತ್ತಿದ್ದಳು. ಕಾಂತಿ ಅವರಿಂದ ಆಕೆಯ ಮೊಬೈಲ್ ಸಂಖ್ಯೆ ಪಡೆದ ಪೊಲೀಸರು ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದರು. ಅದರಲ್ಲಿ ಆಕೆಯ ಹಲವು ಸಂಬಂಧಿಕರ ಸಂಖ್ಯೆಗಳು ಸಿಕ್ಕವು.

ಅವರಿಂದ ವಿಳಾಸ ತಿಳಿದುಕೊಂಡು ಪೊಲೀಸರು ತಮಿಳುನಾಡಿನ ನಾಗಪಟ್ಟಿನಂಗೆ ತೆರಳಿದರು. ಆದರೆ, ಆಕೆ ಒಡವೆ ಮಾರಿ ಕೇರಳದಲ್ಲಿ ತಲೆಮರೆಸಿಕೊಂಡಿದ್ದಳು. ಮೊದಲು ತೋಪಿಕ್‍ನನ್ನು ವಶಕ್ಕೆ ಪಡೆದು, ಆತನಿಂದ ಕಾತ್ಯಾಯಿನಿಗೆ ಕರೆ ಮಾಡಿಸಿ ಮನೆ ಹತ್ತಿರ ಕರೆಸಿಕೊಂಡರು. ಆಕೆ ಬಂದ ಬಳಿಕ ವಶಕ್ಕೆ ಪಡೆದು ಗಿರವಿ ಇಟ್ಟಿದ್ದ ಒಡವೆಯನ್ನು ಜಪ್ತಿ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಅಪರಾಧದ ಹಿನ್ನೆಲೆ

ಬಂಧಿತ ಕಾತ್ಯಾಯಿನಿ 2013ರಲ್ಲಿ ತನ್ನದೇ ಊರಿನಲ್ಲಿ ಕೆಲಸಕ್ಕೆ ಸೇರಿಕೊಂಡು ಮನೆಯೊಡತಿಗೆ ನಿದ್ರೆ ಮಾತ್ರೆ ಬೆರಿಸಿದ್ದ ಕಾಫಿ ಕುಡಿಸಿ ಹಲ್ಲೆ ನಡೆಸಿದ್ದಳು. ಆ ಮಹಿಳೆ ಪ್ರಜ್ಞೆ ಕಳೆದುಕೊಂಡ ನಂತರ, ಮೃತಪಟ್ಟಿರಬಹುದೆಂದು ಭಾವಿಸಿ ಅವರನ್ನು ಎಳೆದೊಯ್ದು ಮನೆ ಹತ್ತಿರದ ಪೊದೆಯೊಂದರಲ್ಲಿ ಎಸೆದು ಬಂದಿದ್ದಳು.

ನಾಲ್ಕು ತಾಸುಗಳ ಬಳಿಕ ಎಚ್ಚೆತ್ತುಕೊಂಡ ಮಹಿಳೆ, ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣದಲ್ಲಿ ಬಂದಿತಳಾಗಿದ್ದ ಕಾತ್ಯಾಯಿನಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರಿಸಿಕೊಂಡು ಓಡಾಡುತ್ತಿದ್ದಳು. ಅಷ್ಟೇ ಅಲ್ಲದೇ, ಕಾತ್ಯಾಯಿನಿ, ಆಕೆಯ ಮಗಳು ಹಾಗೂ ಪ್ರಿಯಕರನ ವಿರುದ್ಧ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಪಾರ್ಥಸಾರತಿ (40) ಎಂಬುವರನ್ನು ಚಲಿಸುತ್ತಿದ್ದ ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದ ಆರೋಪವೂ ಇದೆ. ಈ ಬಗ್ಗೆ ತಮಿಳುನಾಡಿನ ತಿರುವಳ್ಳೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT