ಬಿ.ಜಿ.ಬಣಕಾರ್ ಮತ್ತು ಡಾ.ಹೋ.ಶ್ರೀನಿವಾಸಯ್ಯ 
ಜಿಲ್ಲಾ ಸುದ್ದಿ

ರಾಜ್ಯ ಒಡೆಯುವವರಿಗೆ ಬುದ್ಧಿ ಹೇಳಿ

ಕರ್ನಾಟಕವನ್ನು ಒಡೆಯುವ ಮಾತುಗಳು ಇಂದು ಹೆಚ್ಚಾಗಿ ಕೇಳಿ ಬರುತ್ತಿದ್ದು, ನಾವು ಅದಕ್ಕೆ ಅವಕಾಶ ಕಲ್ಪಿಸಬಾರದು. ಬದಲಾಗಿ...

ಬೆಂಗಳೂರು: ಕರ್ನಾಟಕವನ್ನು ಒಡೆಯುವ ಮಾತುಗಳು ಇಂದು ಹೆಚ್ಚಾಗಿ ಕೇಳಿ ಬರುತ್ತಿದ್ದು, ನಾವು ಅದಕ್ಕೆ ಅವಕಾಶ ಕಲ್ಪಿಸಬಾರದು. ಬದಲಾಗಿ ಅಂತಹವರಿಗೆ ಬುದ್ದಿ ಹೇಳಬೇಕು ಎಂದು ಮಾಜಿ ಸಚಿವ ಬಿ.ಜಿ.ಬಣಕಾರ್ ಹೇಳಿದರು. ಭಾನುವಾರ ಗಾಂಧಿಭವನದಲ್ಲಿ ನಡೆದ ಹುತಾತ್ಮ ಮಹಾದೇವಪ್ಪ ಮೈಲಾರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ ದ ಅವರು, ಮೈಸೂರು, ಮುಂಬಯಿ,ಹೈದರಾಬಾದ್ ಸೇರಿದಂತೆ ವಿವಿಧ ಪ್ರಾಂತ್ಯಗಳು ಒಟ್ಟಾಗಿ ಸೇರಿ ಕನ್ನಡ ನಾಡಾಗಿದೆ. ಅದನ್ನು ಒಡೆಯುವ ಯತ್ನ ಯಾರಿಂದಲೂ ಆಗಬಾರದು. ಕರ್ನಾಟಕ ರಾಜ್ಯ ಏಕೀಕರಣವಾಗಲು ಸಾಕಷ್ಟು ಜನರ ಪರಿಶ್ರಮವಿದೆ. ಅಂತಹ ವ್ಯಕ್ತಿಗಳ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದರು. ಯುವಕರು ಸಮಾಜದ ಭ್ರಷ್ಟಾಚಾರ ಹಾಗೂ ರಾಜ್ಯವನ್ನು ಒಡೆಯಲು ಮುಂದಾಗುವವರ ವಿರುದ್ಧ ಹೋರಾಡಲು ಮುಂದಾಗಬೇಕು. ಸ್ವಾತಂತ್ರ್ಯದ ನಿಜವಾದ ಆದರ್ಶಗಳನ್ನು ಈಡೇರಿಸಿ, ಉತ್ತಮ ಆಡಳಿತ ಪಡೆಯಲು ಹೋರಾಡ ಬೇಕು. ಸ್ವಾತಂತ್ರ್ಯದ ನಿಜವಾದ ಫಲ ಲಭ್ಯವಾಗುತ್ತಿಲ್ಲ. ಸ್ವಾತಂತ್ರ್ಯದ ಸದ್ಬಳಕೆ ಅವಶ್ಯ. ಈ ಸ್ವಾತಂತ್ರ್ಯ ತಂದುಕೊಟ್ಟಿರುವ ಗಾಂಧೀಜಿ ಅವರ ಜೀವನಾದರ್ಶ ನಮಗೆಲ್ಲ ಮಾದರಿಯಾಗಲಿ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೋ.ಶ್ರೀನಿವಾಸಯ್ಯ ಮಾತನಾಡಿ, ಇಂದಿನ ಮಕ್ಕಳು ಶಿಕ್ಷಿತರಾ ಗುತ್ತಿದ್ದಾರೆ. ಆದರೆ ಗುಣವಂತರಾಗು ತ್ತಿಲ್ಲ. ಹೆಚ್ಚು ಅಂಕಗಳನ್ನು ಪಡೆದು ಸಾಕ್ಷರರಾಗುತ್ತಿದ್ದಾರೆಯೇ ಹೊರತು ಶಿಕ್ಷಿತರಾಗುತ್ತಿಲ್ಲ. ಜಾಗತೀಕರಣದ ಕಾಲದಲ್ಲಿ ಯುವಕರು ಸಮಾಜದಿಂದ ದೂರವಾಗುತ್ತಿದ್ದಾರೆ ಎಂಬುದು ಆತಂಕ ಕಾರಿ ವಿಚಾರ. ಇದರಿಂದ ಸಣ್ಣ ವಿಚಾರ ಗಳಿಗೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಡಾ.ಲೀಲಾ ಅಪ್ಪಾಜಿ ಮಾತನಾಡಿ, ನೋಬಲ್ ವ್ಯಕ್ತಿತ್ವ ಗಾಂಧೀಜಿಯವರೊಳಗೆ ಅಂತರ್ಗತವಾಗಿದ್ದು, ಅವರಿಗೆ ಯಾವುದೇ ನೋಬಲ್ ಪ್ರಶಸ್ತಿಯ ಅವಶ್ಯಕತೆಯಿಲ್ಲ. ನೋಬಲ್ ಪ್ರಶಸ್ತಿಗಾಗಿ ಗಾಂಧೀಜಿ ಯವರ ಹೆಸರನ್ನು ಹಲವು ಬಾರಿ ಶಿಫಾರಸು ಮಾಡಿದರೂ, ಗಾಂಧೀ ಯವರಿಗೆ ನೋಬಲ್ ಪ್ರಶಸ್ತಿ ನಿರಾ ಕರಿಸಲಾಗಿದೆ. ವಿಪರ್ಯಾಸವೆಂದರೆ ಪ್ರತಿ ವರ್ಷ ಶಾಂತಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರು ಗಾಂಧೀಜಿಯವರನ್ನು ಸ್ಮರಿಸುತ್ತಾರೆ. ಗಾಂಧಿಯಂಥ ಸಾಧಕರಿಗೆ ನೋಬಲ್ ನೀಡುವುದರಿಂದ ಆ ಪ್ರಶಸ್ತಿಯ ಗರಿ ಹೆಚ್ಚುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮಹಾದೇವಪ್ಪ ಮೈಲಾರ ಜೀವನ ಚರಿತ್ರೆ ಲೋಕಾರ್ಪಣೆಗೊಳಿಸಲಾಯಿತು. ಮಹಾದೇವಪ್ಪ ಮೈಲಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ಅಧ್ಯಕ್ಷ ಎಚ್.ಎಸ್.ಮಹಾದೇವ್, ವೈದ್ಯೆ, ಮಹಾದೇವಪ್ಪ ಮೈಲಾರ ಅವರ ಪುತ್ರಿ ಕಸ್ತೂರಿ ದೇವಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT