ಕೊಡಗು: ಟಿಪ್ಪು ಜಯಂತಿಯಂದು ಕೊಡಗಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಸೋಮವಾರ ನ್ಯಾಯಾಂಗ ವಿಚಾರಣೆ ಜರುಗಿತು.
ಘಟನೆಯ ತನಿಖಾಧಿಕಾರಿ ಆಗಿರುವ ಮೈಸೂರು ಜಿಲ್ಲಾಧಿಕಾರಿ ಶಿಖಾ 37 ಮಂದಿಯ ವಿಚಾರಣೆ ನಡೆಸಿದರು. ಜಿಲ್ಲಾಡಳಿತದ ಪರವಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮಾರಾವ್ ವಿಚಾರಣೆಯೂ ನಡೆಯಿತು. ಅಂದು ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಹಾಗೂ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಪ್ರಕರಣದ ಮ್ಯಾಜಿಸ್ಟ್ರೀರಿಯಲ್ ವಿಚಾರಣೆ, ಘಟನೆ ವಿಷಯಗಳ ಮತ್ತಿತರ ಅಂಶಗಳನ್ನು ಖುದ್ದಾಗಿ ನೋಡಿರುವ ವ್ಯಕ್ತಿಗಳು, ಸಂಬಂಧಿಸಿದ ಮಾಹಿತಿ ಹಾಗೂ ದಾಖಲೆಗಳನ್ನು ಮೈಸೂರು ಜಿಲ್ಲಾಧಿಕಾರಿ ಎಸ್.ಶಿಖಾ ಪರಿಶೀಲಿಸಿದರು.