ಪುರಭವನ 
ಜಿಲ್ಲಾ ಸುದ್ದಿ

ಪುರಭವನ ದಿನದ ಬಾಡಿಗೆ ಇಳಿಕೆ ಸಂಭವ

ಹಲವು ತಿಂಗಳಿಂದ ವಿರೋಧ ಹಾಗೂ ಗೊಂದಲದ ನಡುವೆ ಪುರಭವನದ ದಿನದ ಬಾಡಿಗೆ ರು.1.25 ಲಕ್ಷದಿಂದ ದರ...

ಬೆಂಗಳೂರು: ಹಲವು ತಿಂಗಳಿಂದ ವಿರೋಧ ಹಾಗೂ ಗೊಂದಲದ ನಡುವೆ ಪುರಭವನದ ದಿನದ ಬಾಡಿಗೆ ರು.1.25 ಲಕ್ಷದಿಂದ ದರ ರು.67,000 ಹಾಗೂ ರು.30,000ಕ್ಕೆ ಇಳಿಕೆಯಾಗುವ ಹಂತಕ್ಕೆ ತಲುಪಿದೆ. 
ವಿಶೇಷ ಆಯುಕ್ತ ಜೆ.ರವಿಶಂಕರ್ ನೇತೃತ್ವದ ಸಮಿತಿ ಈ ಕುರಿತು ವರದಿ ನೀಡಿದ್ದು, ಬಾಡಿಗೆ ದರವನ್ನು ರು.67,000 ಹಾಗೂ ರು.30,000 ಎಂದು ಎರಡು ವಿಧವಾಗಿ ವರ್ಗೀಕರಿಸಲಾಗಿದೆ. ಈ ಪ್ರಸ್ತಾವನೆಯನ್ನು ಆಯುಕ್ತ ಕುಮಾರ್ ನಾಯಕ್ ಪರಿಶೀಲಿಸಲಿದ್ದು, ನಂತರ ಮೇಯರ್ ಮಂಜುನಾಥ ರೆಡ್ಡಿ ಕೌನ್ಸಿಲ್ ನಲ್ಲಿ ಮಂಡಿಸಲಿದ್ದಾರೆ. ಕೌನ್ಸಿಲ್ ಸದಸ್ಯರ ಅನುಮೋದನೆ ಪಡೆದ ನಂತರ ಬಾಡಿಗೆ ಪರಿಷ್ಕರಣೆಯಾಗಲಿದೆ. 
ಪುರಭವನ ನವೀಕರಣ ಕಾಮಗಾರಿ ಬಳಿಕ, ಸಾಲದ ಹೊರೆ ಹಾಗೂ ನವೀಕರಣ ಕಾಮಗಾರಿಗೆ ತಗುಲಿದ ವೆಚ್ಚವನ್ನು ಪರಿಗಣಿಸಿ ದಿನ ಬಾಡಿಗೆಯನ್ನು ರು.1.25 ಲಕ್ಷಕ್ಕೆ ಏರಿಸಲಾಗಿತ್ತು. ಇದು ಸಾಹಿತ್ಯಾಸಕ್ತರು, ರಂಗಕರ್ಮಿಗಳ ಕೋಪಕ್ಕೆ ಗುರಿಯಾಗಿದ್ದು, ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು. ಶಾಂತಕುಮಾರಿ ಅವರು ಮೇಯರ್ ಆಗಿದ್ದಾಗ ಸುಮಾರು ರು.6 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆದಿತ್ತು. 
ಇದಕ್ಕೂ ಮುನ್ನ ದಿನ ಬಾಡಿಗೆ ದರ ಕೇವಲ ರು.5,000ವಾಗಿತ್ತು. ಆಡಳಿತಾಧಿಕಾರಿ ವಿಜಯಭಾಸ್ಕರ್ ಅವರ ಅವಧಿಯಲ್ಲಿ ಬಾಡಿಗೆ ಪರಿಷ್ಕರಿಸುವ ಬಗ್ಗೆ ಬ್ರಾಡ್‍ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಇಂಡಿಯಾ (ಬಿಇಸಿಐಎಲ್)ನ ನಿವೃತ್ತ ಅಧಿಕಾರಿ ನರಸಿಂಹಸ್ವಾಮಿ ಅವರ ಸಲಹೆ ಕೇಳಲಾಗಿತ್ತು. 
ಟಿಕೆಟ್ ಶುಲ್ಕ ವಿಧಿಸುವ ಪ್ರದರ್ಶನಗಳಿಗೆ ರು.73,000, ಸಾಮಾನ್ಯ ಕಾರ್ಯಕ್ರಮಗಳಿಗೆ ರು.67,000 ಹಾಗೂ ಕನ್ನಡ ಸಾಹಿತ್ಯ, ಕಲೆ  ಕಾರ್ಯಕ್ರಮಗಳಿಗೆ ರು.30,000 ಬಾಡಿಗೆ ನಿಗದಿ ಮಾಡಬಹುದು ಎಂದು ಸ್ವಾಮಿ ಅವರು ಸಲಹೆ ನೀಡಿದ್ದರು. ಈ ಪ್ರಸ್ತಾವನೆಯೂ ಬಿಬಿಎಂಪಿಯಲ್ಲಿ ಇರುವಾಗಲೇ ಮತ್ತೊಂದು ಸಮಿತಿ ವರದಿ ನೀಡಿದೆ. ಆದರೆ ರು.30,000ದ ದರವನ್ನೂ ಕಡಿಮೆ ದರ ನಿಗದಿ ಮಾಡಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!