ಬಿಬಿಎಂಪಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬಿಬಿಎಂಪಿ ಲೆಕ್ಕಪತ್ರ ಮಂಡಿಸಲು ಒತ್ತಾಯ

ಕಳೆದ ಐದು ವರ್ಷಗಳ ಲೆಕ್ಕಪತ್ರ ಹಾಗೂ ಆಡಳಿತಾತ್ಮಕ ವರದಿಯನ್ನು ಬಿಬಿಎಂಪಿಯಲ್ಲಿ ಮಂಡಿಸಬೇಕು, ಉತ್ತಮ ವಾರ್ಡ್ ಸಮಿತಿ ರಚಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ...

ಬೆಂಗಳೂರು: ಕಳೆದ ಐದು ವರ್ಷಗಳ ಲೆಕ್ಕಪತ್ರ ಹಾಗೂ ಆಡಳಿತಾತ್ಮಕ ವರದಿಯನ್ನು ಬಿಬಿಎಂಪಿಯಲ್ಲಿ ಮಂಡಿಸಬೇಕು, ಉತ್ತಮ ವಾರ್ಡ್ ಸಮಿತಿ ರಚಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.

ನಮ್ಮ ಬೆಂಗಳೂರು ಪ್ರತಿಷ್ಠಾನದ ಕಾರ್ಯನಿರ್ವಾಕ  ಅಧಿಕಾರಿ ಶ್ರೀಧರ್ ಪಬ್ಬಿಸೆಟ್ಟಿ ನೇತೃತ್ವದಲ್ಲಿ, ನಾಗರಿಕರ ಸಹಭಾಗಿತ್ವ (ಸಿಪಿ) ರೂಪಿಸಿದ್ದ ನಾಗರಿಕರ ಸನ್ನದುವಿಲ್ಲಿರುವ ಬೇಡಿಕೆಗಳನ್ನು ಸದಸ್ಯರು ಶನಿವಾರ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದರು. ಈವರೆಗಿನ ಹಣಕಾಸು ವ್ಯವಹಾರಗಳ ಬಗ್ಗೆ ಸಿಎಜಿಯಿಂದ ಲೆಕ್ಕ ಪರಿಶೋಧನೆ ನಡೆಸಬೇಕು. ಕೂಡಲೇ ಸದೃಢ ವಾರ್ಡ್ ಸಮಿತಿ ರಚಿಸಿ ಪಾರದರ್ಶಕ ಆಡಳಿತಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದ ತಂಡ ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಹಲವು ವರ್ಷಗಳಿಂದ ಬಿಬಿಎಂಪಿ ಲೆಕ್ಕಪತ್ರಗಳನ್ನು ಮಂಡಿಸಿ ಸಿಎಜಿ ಲೆಕ್ಕಪರಿಶೋಧನೆಗೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಮುಖ್ಯಮಂತಿ  ಸಿದ್ದರಾಮಯ್ಯ ಅವರೊಂದಿಗೆ ಈ ಬಗ್ಗೆ ಸಭೆ ನಡೆಸಿ, ಪರಿಶೋಧನೆಗೆ ಕ್ರಮ ಕೈಗೊಳ್ಳಬೇಕು. ಶಾಸಕರು ಹಾಗೂ ಪಾಲಿಕೆ ಸದಸ್ಯರ ಕಾರ್ಯನಿರ್ವ ಹಣೆಯ ಬಗ್ಗೆ ಮೌಲ್ಯಮಾಪನ ನಡೆಸಿ ಸಾರ್ವಜನಿಕರ ಮುಂದೆ ಮಂಡಿಸಬೇಕು. ಬಿಬಿಎಂಪಿಯಲ್ಲಿ ೯೦೦ ಬ್ಯಾಂಕ್ ಖಾತೆಗಳಿವೆ. ಈಗ ೮೭೫ ಖಾತೆಗಳನ್ನು ರದ್ದುಪಡಿಸಲಾಗಿದೆ. ರದ್ದುಪಡಿಸಿದ ಖಾತೆಗಳಲ್ಲಿ ಅಕ್ರಮಗಳು ನಡೆದಿದ್ದು, ಈ ಬಗ್ಗೆ ತನಿಖೆಯಾಗಬೇಕು. ಈ ಸಮಸ್ಯೆ ಗಳನ್ನು ಪರಿಹರಿಸಬೇಕು ಎಂದು ಶ್ರೀಧರ್ ಪಬ್ಬಸೆಟ್ಟಿ ಕೋರಿದರು.

ಶ್ರೀಧರ್ ಪಬ್ಬಿಸೆಟ್ಟಿ ಮಾತನಾಡಿ, ಆಳವಾದ ವ್ಯವಸ್ಥಿತ ಬದಲಾವಣೆ, ಹೆಚ್ಚಿನ ಪಾರದರ್ಶಕತೆ ಅಲ್ಲದೆ ಉತ್ತರದಾಯಿತ್ವವನ್ನು ಬೆಂಗಳೂರಿನ ಎಲ್ಲಾ ಆಡಳಿತ ಭಾಗಗಳಲ್ಲಿ ತರುವ
ಬದ್ಧತೆಯನ್ನು ನಾವು ಹೊಂದಿದ್ದೇವೆ. ರಾಜಕೀಯ ನಾಯಕತ್ವದೊಂದಿಗೆ ಈ ಸಭೆಗಳು ನಗರದ ಅಭಿವೃದ್ಧಿಗೆ ತಡೆಯಾಗುತ್ತಿರುವ ನಾಗರಿಕ ಆಡಳಿತದ ಕೊರತೆಯನ್ನು ನೀಗಿಸುವ ಉದ್ದೇಶವ ನ್ನು ಹೊಂದಿವೆ. ಬಿಬಿಎಂಪಿಯಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಕಾರ್ಯಾಶತ್ಮಕ ವಾರ್ಡ್ ಸಮಿತಿಗಳ ಖಾತ್ರಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಸಚಿವರು ಮತ್ತು ಮೇಯರ್ ಅವರು ತಮ್ಮ ಸಮಯ ಮತ್ತು ಭರವಸೆ ನೀಡಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

SCROLL FOR NEXT