ಜಿಲ್ಲಾ ಸುದ್ದಿ

ಬಿಆರ್‍ಟಿ ಶೀಘ್ರದಲ್ಲೇ ಸೂಕ್ಷ್ಮ ಪರಿಸರ ವಲಯ

ಚಾಮರಾಜನಗರ: ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳ ಸುತ್ತಮುತ್ತ ನಡೆಯುವ ಅಭಿವೃದ್ಧಿಕಾರ್ಯಗಳಿಂದ ಪರಿಸರಕ್ಕಾಗುವ ಹಾನಿ ತಡೆಗಟ್ಟುವಲ್ಲಿ ಪರಿಸರ ಸೂಕ್ಷ್ಮವಲಯ ರಚಿಸುವ ಸಂಬಂಧ ರಾಷ್ಟ್ರದಾದ್ಯಂತ 500 ಪ್ರಸ್ತಾವಗಳು ಬಂದಿವೆ.

ಆ ಪೈಕಿ 2016 ಮಾರ್ಚ್ 26 ರೊಳಗೆ 300 ಪ್ರದೇಶಗಳನ್ನು ಘೋಷಣೆ ಮಾಡುವ ಸಂಬಂಧ ಸಿದ್ಧತೆ ನಡೆದಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು. ಬಿಆರ್‍ಟಿ ಹುಲಿ ರಕ್ಷಿತಾರಣ್ಯವನ್ನೂ ಸಹ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ. ರಾಜ್ಯ ಸರ್ಕಾರ ಅರಣ್ಯ ಇಲಾಖೆ ಮೂಲಕ ಈ ಹಿಂದೆಯೇ ಪ್ರಸ್ತಾವ ಕಳುಹಿಸಿತ್ತು ಎಂದರು. ಬಿಆರ್‍ಟಿ ಹುಲಿ ರಕ್ಷಿತಾರಣ್ಯದ ಕೆ. ಗುಡಿಗೆ ಭಾನುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು.

ಸೂಕ್ಷ್ಮ ಪರಿಸರ ವಲಯ ಘೋಷಣೆ ಬಳಿಕ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಯಾವುದಾದರೂ ಸದ್ಧಳ ಬಿಟ್ಟು ಹೋಗಿದ್ದರೆ ಅಥವಾ ಹೊಸದಾಗಿ ಸೇರ್ಪಡೆ ಮಾಡಬೇಕಿದ್ದರೆ
ಸಲ್ಲಿಸಬಹುದು ಎಂದ ಅವರು ಬಿಆರ್‍ಟಿ ಹುಲಿ ರಕ್ಷಿತಾರಣ್ಯದ ಮಧ್ಯ ಭಾಗದಲ್ಲಿ ಕೆಲ ಕಾಪಿs ಎಸ್ಟೇಟ್‍ಗಳಿದ್ದು, ಅವುಗಳನ್ನು ಬ್ರಿಟಿಷರ ಕಾಲದಲ್ಲಿಯೇ ಗುತ್ತಿಗೆ ನೀಡಲಾಗಿದೆ. ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ವಿಸ್ತರಣೆಗೆ ಅವಕಾಶವಿಲ್ಲ ಎಂದರು.

ಪ್ರಪಂಚದಲ್ಲಿರುವ ಆನೆ ಸಂತತಿಯಲ್ಲಿ ನಮ್ಮ ರಾಷ್ಟ್ರದಲ್ಲಿ ಶೇ. 17 ರಷ್ಟಿದ್ದು. ಆನೆ ದಂತ ಸೇರಿದಂತೆ ಇತರೆ ಪದಾರ್ಥಗಳನ್ನು ಮಾರಾಟ ಮಾಡಲು ವನ್ಯಜೀವಿ ಕಾಯ್ದೆಯಡಿ ನಿರ್ಬಂಧ
ಇರುವುದರಿಂದ ಮತ್ತು ಇದಕ್ಕಾಗಿ ಬೇಟೆಯಾಡುವು ದನ್ನು ನಿಲ್ಲಿಸಿರುವುದರಿಂದ ಆನೆ ರಕ್ಷಣೆ ಉತ್ತಮವಾಗಿದೆ. ಬಿಆರ್‍ಟಿ ಅರಣ್ಯದಲ್ಲಿ ಹುಲಿ ಮತ್ತು ಆನೆಗಳ ರಕ್ಷಣಾ ಕಾರ್ಯದಲ್ಲಿ ಆದಿವಾಸಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಮಾಡಿದ್ದಾರೆ. ಅಲ್ಲದೆ, ಕಳ್ಳಬೇಟೆ ನಿಯಂತ್ರಣಕ್ಕೆ ಶಿಬಿರಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲಾಗಿದ್ದು, ಈ ಶಿಬಿರಗಳಲ್ಲಿ ಅರಣ್ಯ ರಕ್ಷಣೆಗೆ ಸೋಲಿಗರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ಕ್ಯಾಂಪ್‍ಗೂ ಹುಲಿ ಸಾಫ್ಟ್ ವೇರ್ ಅಳವಡಿಸಿದ ಆ್ಯಂಡ್ರಾಯ್ಡ್ ಮೊಬೈಲ್ ನೀಡುವ ಮೂಲಕ ಅತ್ಯತ್ತಮವಾಗಿ ಹುಲಿ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

SCROLL FOR NEXT