ಜಿಲ್ಲಾ ಸುದ್ದಿ

ಪ್ರಶಸ್ತಿ ಹಿಂತಿರುಗಿಸಿದ ಅಕ್ಷತಾ ಹುಂಚದಕಟ್ಟೆ

Srinivasamurthy VN

ಶಿವಮೊಗ್ಗ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆ ವಿರೋಧಿಸಿ ಲೇಖಕಿ, ಕವಿ ಅಕ್ಷತಾ ಹುಂಚದಕಟ್ಟೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ವಾಪಸು ನೀಡಲು  ನಿರ್ಧರಿಸಿದ್ದಾರೆ.

ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಅವರ ಆತ್ಮಕಥನ ‘ಕಾಡ ತೊರೆಯ ಜಾಡು’ ಕೃತಿಯನ್ನು ನಿರೂಪಿಸಿದ್ದಕ್ಕಾಗಿ ೨೦೧೧ರಲ್ಲಿ ಅವರಿಗೆ ಪುಸ್ತಕ ಬಹುಮಾನ ಬಂದಿತ್ತು. ಈ ಹೊತ್ತು ಒಂದ ಕ್ಕೊಂದು ಕೊಂಡಿ ಬೆಸೆದಂತೆ ನಡೆಯುತ್ತಿರುವ ಮನುಷ್ಯ ವಿರೋಧಿ ಕೃತ್ಯಗಳನ್ನೂ, ಮಾನವತಾವಾದದ ಸೋಲನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಯನ್ನು ಖಂಡಿಸಿ ಪ್ರತಿರೋಧದ ಧ್ವನಿ ಎತ್ತಿ ಪ್ರಶಸ್ತಿ ಪುರಸ್ಕಾರಗಳನ್ನು ಹಿಂದಿರುಗಿಸುತ್ತಿರುವ ಪ್ರಜ್ಞಾವಂತ ಲೇಖಕ ಬಳಗದ ಜತೆ ನನ್ನ ಧ್ವನಿಯನ್ನು ಸೇರಿಸುವುದು, ಅಂಥದೊಂದು ಚಳವಳಿಯ ಭಾಗವಾಗುವುದು ನನ್ನ ಜವಾಬ್ದಾರಿ ಎಂದಿದ್ದಾರೆ.

ಬಹುಮಾನದ ಮೊತ್ತ ರು.೫,೦೦೦ ಹಾಗೂ ಪ್ರಶಸ್ತಿ ಫಲಕವನ್ನು ಸಾಹಿತ್ಯ ಅಕಾಡೆಮಿಗೆ ವಾಪಸು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.

SCROLL FOR NEXT