ಮಾಜಿ ಸಚಿವ ಎಲ್. ಆರ್.ಶಿವರಾಮೇಗೌಡ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬಿಬಿಎಂಪಿ: ಸೋಲಿಸಿದವರಿಗೆ ನೋಟಿಸ್ ಜಾರಿ

ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಿ.ರಮೇಶ್, ಮಾಜಿ ಸಚಿವ ಎಲ್. ಆರ್.ಶಿವರಾಮೇಗೌಡ ಸೇರಿದಂತೆ 20 ಮಂದಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ನೋಟಿಸ್ ಜಾರಿ ಮಾಡಿದೆ...

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಿ.ರಮೇಶ್, ಮಾಜಿ ಸಚಿವ ಎಲ್. ಆರ್.ಶಿವರಾಮೇಗೌಡ ಸೇರಿದಂತೆ 20 ಮಂದಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ನೋಟಿಸ್ ಜಾರಿ ಮಾಡಿದೆ.

ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದ್ದು, ಆರೋಪ ಸಂಬಂಧ ಕಾರಣ ನೀಡುವಂತೆ ಸೂಚನೆ ನೀಡಲಾಗಿದೆ. ಪಿ.ರಮೇಶ್ ಅವರು ತಮ್ಮ ಸೋಲಿಗೆ ಕಾರಣರಾಗಿದ್ದಾರೆ ಎಂದು ಇಂದಿರಾನಗರ ವೆಂಕಟೇಶ್ ಎಂಬುವರು ಕೆಪಿಸಿಸಿಗೆ ದೂರು ನೀಡಿದ್ದರು. ಅದೇ ರೀತಿ ಮುನಿರಾಜು ಎಂಬುವರು ನನ್ನ ಸೋಲಿಗೆ ಕಾರಣರಾಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ನಾಯ್ಡು ಅವರು ದೂರು ನೀಡಿದ್ದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಎಲ್.ಆರ್. ಶಿವರಾಮೇಗೌಡ ಹಾಗೂ ಅವರ ಪುತ್ರ ಚೇತನ ಗೌಡ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಮುಖ ಮುಖಂಡರು ಸೇರಿದಂತೆ 20 ಜನರ ವಿರುದ್ಧ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧನ್ಕರ್ ವಿಚಾರವಾಗಿ ಎಚ್ಚೆತ್ತ NDA: ನೂತನ ಉಪರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿ ಪ್ರಧಾನಿ ಮೋದಿ ಸಲಹೆಗಾರ ಅಮಿತ್ ಖರೆ ನೇಮಕ!

Asia Cup 2025: ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ, ಟಾಸ್ ವೇಳೆ ನಾಯಕರ ಹಸ್ತಲಾಘವವಿಲ್ಲ!

Cut Crude oil: ಟ್ರಂಪ್ ಒತ್ತಡದ ಬೆನ್ನಲ್ಲೇ ಕಚ್ಚಾ ತೈಲ, ಅನಿಲ ಆಮದು ಕಡಿತಕ್ಕೆ ಕೇಂದ್ರ ಮುಂದು: ಪ್ರಧಾನಿ ಮೋದಿ ಹೇಳಿದ್ದೇನು?

ದಾವಣಗೆರೆ: ಹಿಂದೂ ದೇವರಿಗೆ ಅವಮಾನ ಮಾಡಿದವರ ಮನೆಗಳಿಗೆ ನುಗ್ಗಿ ಹೊಡಿತೀವಿ- ಪ್ರಮೋದ್ ಮುತಾಲಿಕ್

Assam: ಕಾಂಗ್ರೆಸ್ ನಿಂದ ಪಾಕ್ ಉಗ್ರರಿಗೆ ಬೆಂಬಲ, ನುಸುಳುಕೋರರ ರಕ್ಷಣೆ: ಪ್ರಧಾನಿ ಮೋದಿ ಆರೋಪ! Video

SCROLL FOR NEXT