ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊನೆಗೆ ಒಬ್ಬನ ಹತ್ಯೆಯಲ್ಲಿ ಕೊನೆಗೊಂಡಿದೆ.
ಘಟನೆ ನಡೆದಿರುವು ದು ಸೋಮವಾರ ನಗರದ ಮೈಕೋಲೇಔಟ್ ಸಮೀಪದ ಜೆಡಿ ಮರದ ಬಳಿ. ಜೆ.ಪಿ.ನಗರ ರಾಗಿಗುಡ್ಡದ ಶ್ರೀನಿವಾಸ (25) ಕೊಲೆಯಾದವ.
ಆರೋಪಿಗಳಾದ ಅಪ್ಪು, ಗೋಪಿ ಮತ್ತು ಸೆಲ್ವ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಮತ್ತು ಆರೋಪಿಗಳು ಕೂಲಿಗಳಾಗಿದ್ದು, ಬಾರ್‍ಗೆ ಹೋಗಿ ಮದ್ಯಪಾನ ಮಾಡಿದ್ದರು. ಬಳಿಕ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ವಾಗಿದೆ. ಅಪ್ಪು, ಗೋಪಿ ಮತ್ತು ಸೆಲ್ವ ಶ್ರೀನಿವಾಸನ ಮೇಲೆ ಹಲ್ಲೆ ಮಾಡಿ, ಶ್ರೀನಿವಾಸನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ.