ಬೆಂಗಳೂರು: ಮಕ್ಕಳ ಶಾಲಾ ಬ್ಯಾಗ್ ಹೊರೆಯ ಬಗ್ಗೆ ನಿರಂತರವಾಗಿ ಸಾಕಷ್ಟು ಚರ್ಚೆಗಳು ನಡೆದೇ ಇವೆ. ಟೀಕೆ ಟಿಪ್ಪಣಿಗಳೂ ಕೇಳಿ ಬಂದವಾದರೂ ಅದಕ್ಕೊಂದು ಪರಿಹಾರ ಸಿಕ್ಕಿಲ್ಲ. ಇದೀಗ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಮಣಭಾರದ ಶಾಲಾ ಬ್ಯಾಗ್ ತೂಕವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ. ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಕೇಂದ್ರ (ಡಿಎಸ್‍ಇಆರ್‍ಟಿ) ಶಾಲಾ ಬ್ಯಾಗ್ ತೂಕದ ಕುರಿತಂತೆ ಅಧ್ಯಯನ ನಡೆಸಲು ನಾಲ್ಕು ತಂಡಗಳನ್ನು ರಚಿಸಿದೆ. ಈ ತಂಡಗಳು
ಮಕ್ಕಳ ವಯಸ್ಸಿಗೆ ಅನುಗುಣವಾಗಿ ಶಾಲಾ ಬ್ಯಾಗ್ ತೂಕದ ಪ್ರಮಾಣ ಎಷ್ಟಿರಬೇಕು ಎಂಬುದರ ಬಗ್ಗೆ ವೈಜ್ಞಾನಿಕವಾಗಿ ತನಿಖೆ ನಡೆಸಿ ವರದಿಒಪ್ಪಿಸಲಿವೆ. ನವೆಂಬರ್ ತಿಂಗಳಿನಿಂದ ಈ ತಂಡಗಳು ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವುದು, ಎಲ್ಲರೀತಿಯ ಶಾಲೆಗಳನ್ನು ಪರಿಶೀಲನೆ ನಡೆಸಿದ ನಂತರ ಉತ್ತಮ ಅಂಶಗಳನ್ನು ತಿಳಿದು ಆ ಕ್ರಮಗಳನ್ನು ಸಾಮಾನ್ಯವಾಗಿಅನುಸರಿಸಲು ಶಿಫಾರಸು ಮಾಡಲಿವೆ.
ಅಡ್ಡ ಪರಿಣಾಮ: ಶಾಲೆಗಳು ಅನಾವಶ್ಯಕವಾಗಿ ಮತ್ತು ಹೆಚ್ಚುವರಿಯಾಗಿ ಪುಸ್ತಕಗಳ ತರಲು ಸೂಚನೆ ನೀಡುತ್ತಿವೆ, ಇದನ್ನು ತಪ್ಪಿಸುವುದು ಇಲಾಖೆಯ ಉದ್ದೇಶ. ಶಾಲಾ ಬ್ಯಾಗ್ ಹೆಚ್ಚಿನ ಭಾರವಾಗುವ ಕಾರಣ ಮಕ್ಕಳಿಗೆ ಭುಜ,ಕತ್ತು, ಬೆನ್ನು ಮೂಳೆ ನೋವು ದೇಹದ ಬೆಳವಣಿಗೆ ಮೇಲೆ ಪರಿಣಾಮ ಬೀರಲಿ ದೆ. ಮಕ್ಕಳಿಗೆ ದೈಹಿಕ ನೋವು ಕಾಣಿಸಿಕೊಳ್ಳುವುದರಿಂದ ವ್ಯಾಸಂಗದ ಮೇಲಿನ ಆಸಕ್ತಿ ಕಡಿಮೆಯಾಗುವ ಸಾಧ್ಯತೆಗಳು ಇರುತ್ತವೆ. ಇದು ನೇರವಾಗಿ ಮಕ್ಕಳ ವ್ಯಾಸಂಗಕ್ಕೆ ಕುತ್ತು ತರಲಿವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ಕಡಿಮೆ ಮಾಡುವುದು ಈ ಪ್ರಯತ್ನದ ಹಿಂದಿನ ಉದ್ದೇಶವಾಗಿದೆ.
ಅವಕಾಶಗಳು: ವೇಳಾಪಟ್ಟಿ ಅನುಗುಣವಾಗಿ ಪುಸ್ತಕಗಳನ್ನು ಶಾಲೆ ತೆಗೆದುಕೊಂಡು ಹೋಗುವುದರಿಂದ ಮತ್ತು ಶಾಲೆಯಲ್ಲಿಯೇ ವಿದ್ಯಾರ್ಥಿಗಳಿಗೆ ಲಾಕರ್ ವ್ಯವಸ್ಥೆ ಮಾಡುವುದು, ತರಗತಿಗೆ ಅನುಗುಣವಾಗಿ ಪುಸ್ತಕಗಳನ್ನು ತರುವಂತೆ ಮಕ್ಕಳಿಗೆ ತಿಳಿಸುವುದು, ಹೆಚ್ಚಿನ ಮಾಹಿತಿಗಾಗಿ ಕಂಪ್ಯೂಟರ್‍ಗಳ ಬಳಕೆಯಿಂದ ಶಾಲಾ ಬ್ಯಾಗಿನ ಹೆಚ್ಚುವರಿ ಹೊರೆ ತಪ್ಪಿಸಲು ಇರುವ ಅವಕಾಶಗಳು. ಇದನ್ನು ಸಹ ನಾಲ್ಕು ತಂಡಗಳು ಪರಾಮರ್ಶೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ, ಮಕ್ಕಳಿಗೆ ಶಾಲಾ ಬ್ಯಾಗ್ ಹೇಗಿರಬೇಕು ಮತ್ತು ಕಡಿಮೆ ಮಾಡಲು ಅನುಸರಿಸುವ ಮಾರ್ಗಗಳ ಕುರಿತು ಸಾರ್ವಜನಿಕರು, ಪೋಷಕರು ಮತ್ತು ಶಾಲೆಗಳಿಗೂ ಭೇಟಿ ನೀಡಿ ಸಲಹೆ ಸೂಚನೆಗಳು ಪಡೆಯುವಂತೆ ಮತ್ತು ಕೇಂದ್ರ ಶೈಕ್ಷಣಿಕ ಸಲಹಾ ಮಂಡಳಿ (ಸಿಎಬಿಇ) ಸಲಹೆ ಪಡೆದು ಯೋಜನೆ ಸಿದ್ಧಪಡಿಸುವಂತೆ ಡಿಎಸ್ ಇಆರ್‍ಟಿ ಸಮಿತಿಗೆ ಸಲಹೆ ನೀಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos