ಹಾಸನ: ಅಕ್ರಮ ಮರಳು ಸಾಗಣೆ ಲಾರಿಗಳ ಮೇಲೆ ದಾಳಿ ಮಾಡಲು ಹೋದ ಜಿಲ್ಲಾ ಅಪರಾಧ ದಳ (ಡಿಸಿಬಿ) ಇನ್ಸ್‍ಪೆಕ್ಟರ್ ಮೇಲೆ ಮರಳು ಮಾಪಿsಯಾ ಶುಕ್ರವಾರ ಮಾರಣಾಂತಿಕ ಹಲ್ಲೆ ನಡೆಸಿದೆ.
ತೀವ್ರ ಗಾಯಗೊಂಡಿರುವ ಮಂಜೇಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ 4 ಲಾರಿಗಳನ್ನು ವಶಪಡಿಸಿಕೊಂಡಿದ್ದ ಮಂಜೇಗೌಡ ಮತ್ತು ತಂಡ ಶುಕ್ರವಾರ ಬೆಳಗ್ಗೆಯೂ ನಗರದ ಚನ್ನಪಟ್ಟಣ ಬೈಪಾಸ್ ರಸ್ತೆಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ನಿಂತಿದ್ದ ಲಾರಿಗಳನ್ನು ಪರಿಶೀಲಿಸ ತೊಡಗಿದರು.
4 ಲಾರಿಗಳನ್ನು ವಶಕ್ಕೆ ತೆಗೆದುಕೊಂಡ ಬಳಿಕ ನಾಲ್ವರು ಪೇದೆ ಗಳು ಲಾರಿಗಳೊಂದಿಗೆ ಠಾಣೆಗೆ ತೆರಳಿದರು. ಈ ಸಂದರ್ಭದಲ್ಲಿ ಇನ್ಸ್‍ಪೆಕ್ಟರ್, ಅವರ ಜೀಪ್ ಚಾಲಕನ ಮೇಲೆ 30ಕ್ಕೂ ಹೆಚ್ಚು ಮಂದಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಬಗ್ಗೆ ದೂರುಗಳು ಬಂದಿದ್ದರಿಂದ ಅದನ್ನು ತಡೆಗಟ್ಟಲು ಡಿಸಿಬಿ ಇನ್ಸ್‍ಪೆಕ್ಟರ್ ಮಂಜೇಗೌಡ ನೇತೃತ್ವದ ತಂಡ ಕಾರ್ಯನಿರ್ವಹಿಸುವಂತೆ ನಾನೇ ಸೂಚಿಸಿದ್ದೆ. ಹಲ್ಲೆ ಮಾಡಿರುವ ಆರೋಪಿಗಳ ಬಂಧನಕ್ಕೆ 2 ತಂಡಗಳನ್ನು ರಚಿಸಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ತಂಡಗಳನ್ನು ರಚಿಸಲಾಗುತ್ತದೆ.
- ರಮಣ ಗುಪ್ತ ಎಸ್ಪಿ ಹಾಸನ