ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ 
ಜಿಲ್ಲಾ ಸುದ್ದಿ

ನೈಸ್ ಸಂಸ್ಥೆ ಅವ್ಯವಹಾರ ಕಾಗೋಡು ಗಮನಿಸಲಿ: ದೇವೇಗೌಡ

ರಸ್ತೆ ಹೆಸರಿನಲ್ಲಿ ನೂರಾರು ರೈತರ ಸಾವಿರಾರು ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಗುಳುಂ ಮಾಡಿದೆ. ಅದಕ್ಕೆ ಸಂಬಂಧಿಸಿದ...

ಬೆಂಗಳೂರು: ರಸ್ತೆ ಹೆಸರಿನಲ್ಲಿ ನೂರಾರು ರೈತರ ಸಾವಿರಾರು ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಗುಳುಂ ಮಾಡಿದೆ. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಅಲ್ಲಿನ ಭೂ ಅವ್ಯವಹಾರ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಗಮನ ಹರಿಸಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದ್ದಾರೆ.
ಭೂ ಸುಧಾರಣೆ ಕಾಯ್ದೆ ಬಗ್ಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿಕೆ ವಿರುದ್ಧ ಮಾತನಾಡಿದ ಅವರು, ನೈಸ್ ಸಂಸ್ಥೆ ಭೂಮಿ ವಶಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇಟ್ಟಿಲ್ಲ. ಇದು ರೈತರಿಗೆ ಮಾಡಿರುವ ದ್ರೋಹ. ಹೂಡಿಕೆದಾರರು ಕೈಗಾರಿಕೆ ಸ್ಥಾಪಿಸಿಲು ಮುಂದಾದಾಗ ಕಟ್ಟುನಿಟ್ಟಾಗಿ ದಾಖಲೆ ಸಿದ್ಧ ಮಾಡಬೇಕು. ತಮಗೆ ಎಷ್ಟು ಭೂಮಿ, ನೀರು ಬೇಕು, ಅವರು ಹೂಡಲಿರುವ ಬಂಡವಾಳ ದಾಖಲೆಯಲ್ಲಿಡಬೇಕು. ಆ ಕೆಲಸ ಆಗಿಲ್ಲ. ಆ ಬಗ್ಗೆ ಸ್ಪೀಕರ್ ಅವರು ಗಮನಹರಿಸಲಿ ಎಂದು ತಿರುಗೇಟು ನೀಡಿದರು.

ಭೂಮಿ ಅತಿಕ್ರಮಣದ ಬಗ್ಗೆ ಸದನ ಸಮಿತಿ ಕೂಡ ರಚಿಸಲಾಗಿದೆ. ಅಂತಿಮ ವರದಿ ಇನ್ನು
ಸರ್ಕಾರದ ಕೈಸೇರಿಲ್ಲ. ಆದ್ದರಿಂದ ನಿಜಾಂಶ ಬಯಲಾಗುತ್ತಿಲ್ಲ. ರಾಜ್ಯದ ಭೂ ಒತ್ತುವರಿ ಸದನ ಸಮಿತಿ ಕಾರ್ಯವೈಖರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಬಗ್ಗೆ ಕೆಲ ಅಧಿಕಾರಿಗಳು ನ್ಯಾಯಾಲಯವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಹಿರೇಮಠರಂತಹ ಹೋರಾಟ ಗಾರರು ಹುಟ್ಟಬೇಕು ಎಂದರು.

ಕಾಗೋಡಿಗೆ ಸಲಹೆ: ಈ ಹಿಂದೆ ದಿ.ದೇವರಾಜ ಅರಸು ಅವರ ಕಾಲದಲ್ಲಿ ವಾರ್ಷಿಕ 12 ಸಾವಿರ ವರಮಾನ ಖರೀದಿ ಮಾಡಬಾರದು ಎಂಬ ನಿಯಮವಿತ್ತು. ಆದರೆ, ರೈತ ಹಾಗೂ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ 12 ಸಾವಿರ ವರಮಾನವನ್ನು ಅವಧಿಯಲ್ಲಿ
ಮಾಡಿರುವುದು ಶೇ.100ರಷ್ಟು ಸತ್ಯ. ಹೀಗೆ ಮಾಡಲು ಕಾರಣ ಏನು ಎಂಬುದನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಚಿವ ಸಂಪುಟಕ್ಕೆ ಅರಕಲಗೂಡು ಶಾಸಕ ಎ.ಮಂಜು ಸೇರ್ಪಡೆ ಹಾಗೂ ಹಾಸನ ಉಸ್ತುವಾರಿ ಆಗಿರುವುದು ನನಗೇಗೂ ಬೇಸರ ಇಲ್ಲ. ಹಾಸನ ನಮ್ಮಿಂದ ಅಭಿವೃದ್ಧಿ ಅಭಿವೃದ್ಧಿ ಆಗಲಿ.
● ಎಚ್ ಡಿ ದೇವೇಗೌಡ ಜೆಡಿಎಸ್ ವರಿಷ್ಠ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT