ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಮಹದಾಯಿ ಹೋರಾಟಕ್ಕೆ ಕೇಂದ್ರ ಸಮಿತಿ ರಚನೆ

ಹುಬ್ಬಳ್ಳಿ ಕಳಸಾ ಬಂಡೂರಿ ಯೋಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ದಿಕ್ಕು ತಪ್ಪದಂತೆ ತಡೆಯಲು ಮತ್ತು ವಿವಿಧ ಸಂಘಟನಗಳು ಒಂದೇ ವೇದಿಕೆಯಡಿ ಹೋರಾಟ...

ಹುಬ್ಬಳ್ಳಿ ಕಳಸಾ ಬಂಡೂರಿ ಯೋಜನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ದಿಕ್ಕು ತಪ್ಪದಂತೆ ತಡೆಯಲು ಮತ್ತು ವಿವಿಧ ಸಂಘಟನಗಳು ಒಂದೇ ವೇದಿಕೆಯಡಿ ಹೋರಾಟ ನಡೆಸಲು ಕೇಂದ್ರ ಸಮನ್ವಯ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಚಳವಳಿ ಏಕತೆ ಹಾಗೂ ಮುಂದಿನ ಹೋರಾಟ ರೂಪಿಸಲು ರೈತ, ಕಾರ್ಮಿಕ, ಕನ್ನಡಪರ ಮತ್ತು ದಲಿತ ಸಂಘಟನೆಗಳು ಮಂಗಳವಾರ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಿಕ್ಸೂಚಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮುಂಬರುವ ದಿನಗಳಲ್ಲಿ ಇದರ ಹೋರಾಟ ಈ ಸಮಿತಿ ತೆಗೆದುಕೊಳ್ಳುವ ನಿರ್ಣಯದಂತೆ ನಡೆಯಲಿದೆ. ಇದರಡಿ ಸಂಚಾಲಕ ಸಮಿತಿ, ಮಾರ್ಗದರ್ಶಕ ಸಮಿತಿ, ಕಾನೂನು ಸಮಿತಿ ಹಾಗೂ ತಾಲೂಕು ಸಮಿತಿ ಎಂಬ 4 ಸಮಿತಿಗಳು ಕಾರ್ಯನಿರ್ವಹಿಸಲಿವೆ. ಈ ಸಮಿತಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರನ್ನು ಪದಾ„ಕಾರಿಗಳಾಗಿ ನೇಮಿಸಲು ನಿರ್ಧರಿಸಲಾಗಿದ್ದು, ಮಾರ್ಗದರ್ಶಕ ಸಮಿತಿಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹಾಗೂ ಕಾಡಯ್ಯ ಹಿರೇಮಠ ಅವರನ್ನು ನೇಮಿಸಲಾಗಿದೆ.

ಕಳಸಾ ಬಂಡೂರಿ ಹೋರಾಟದಲ್ಲಿ ರಾಜಕೀಯ ಪ್ರವೇಶವಾಗಿದೆ. ನಾನಾ ಪಕ್ಷಗಳು ಹೋರಾಟದಲ್ಲಿ ಪಾಲ್ಗೊಂಡು ಹೋರಾಟದ ದಾರಿ ತಪ್ಪಿಸುತ್ತಿವೆ. ರೈತರನ್ನು ಒಡೆದಾಳಲು ಮುಂದಾಗಿದ್ದಾರೆ. ಇದರೊಟ್ಟಿಗೆ ಯೋಜನೆಯ ಅನುಷ್ಠಾನಕ್ಕಾಗಿ ಅಲ್ಲಲ್ಲಿ ಹೋರಾಟ ನಡೆಯುತ್ತಿರುವುದರಿಂದ ಹೋರಾಟ ಕಾವು ಳೆದುಕೊಳ್ಳುವ ಸಾಧ್ಯತೆಯುಂಟು. ಹೀಗಾಗಿ, ಸರ್ಕಾರದ ಮೇಲೆ ಯೋಜನೆಯ ಅನುಷ್ಠಾನಕ್ಕೆ ಒತ್ತಡ ಹೆಚ್ಚಿಸಲು ಒಗ್ಗಟ್ಟಿನ ಹೋರಾಟದ ಅಗತ್ಯ ಮನಗಂಡು ಈ ಸಮಿತಿ ರಚಿಸಲಾಗಿದೆ. ದಿಕ್ಸೂಚಿ ಸಭೆಗೆ ಚಾಲನೆ ನೀಡಿದ ನಾಡೋಜ ಡಾ.ಪಾಪು ಸಮಿತಿ ರಚನೆ ಅಗತ್ಯವಿದೆ ಎಂದು ಸಭೆಯ ಗಮನ ಸೆಳೆದರು.

ಈ ಸಮಿತಿಯು ಹೋರಾಟದ ರೂಪುರೇಷೆ ನಿರ್ಧರಿಸಬೇಕು. ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು. ಏಕಮುಖ ಹೋರಾಟಕ್ಕೆ ಎಲ್ಲರೂ ಇಳಿಯಬೇಕು. ಪಕ್ಷ, ರಾಜಕಾರಣ ಬದಿಗೊತ್ತಿ ರೈತರ ಹಿತ ಸಾಧನೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ಸಭೆಯಲ್ಲಿ ಹಕ್ಕೊತ್ತಾಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT