ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ (ಕೃಪೆ ಪಿಟಿಐ) 
ಜಿಲ್ಲಾ ಸುದ್ದಿ

ಮಹದಾಯಿಗೆ ತಾರಾಬಲ

ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳು ತ್ತಿರುವ ಮಹದಾಯಿಗಾಗಿನ ರೈತರ ಹೋರಾಟಕ್ಕೆ ಗುರುವಾರ ಮತ್ತೆ ತಾರಾಬಲ ಒದಗಿ ಬಂದಿತ್ತು. ಮೊನ್ನೆ..

ಹುಬ್ಬಳ್ಳಿ:  ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳು ತ್ತಿರುವ ಮಹದಾಯಿಗಾಗಿನ ರೈತರ ಹೋರಾಟಕ್ಕೆ ಗುರುವಾರ ಮತ್ತೆ ತಾರಾಬಲ ಒದಗಿ ಬಂದಿತ್ತು. ಮೊನ್ನೆ ಕಿಚ್ಚ ಸುದೀಪ್, ನಿನ್ನೆ ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಚಿತ್ರನಟರು ನರಗುಂದ- ನವಲಗುಂದಕ್ಕೆ ಬಂದು ಪ್ರತಿಭತನಾ ನಿರತ  ರೈತರಿಗೆ  ನಾವಿದ್ದೇವೆ ಎಂದು ಧೈರ್ಯ ತುಂಬಿದ ಬೆನ್ನಲ್ಲೇ  ಹಿರಿಯ ನಟಿ ಲೀಲಾವತಿ ವಿನೋದರಾಜ್, ಪ್ರೇಮ್ ಮತ್ತಿತರರು ಗುರುವಾರ ಧರಣಿ ನಿರತ ರೈತರಲ್ಲಿಗೆ ಬಂದು ಬೆಂಬಲ ವ್ಯಕ್ತಪಡಿಸಿದರು. ಸೆ.13ರದು ಕನ್ನಡ ಚಲನಚಿಚ್ರ ರಂಗದ ಬಹುತೇಕ ನಟರು ಮತ್ತು ಕಲಾವಿದರು ನರಗುಂದಕ್ಕೆ ಆಗಮಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಆದಾಗ್ಯೂ ಈಗಾಗಲೇ ತಾರೆಯರು ಸಾಲು ಸಾಲಾಗಿ ಬಂದು ಬಲ ವ್ಯಕ್ತಪಡಿಸುತ್ತಿರುವುದು ಹೋರಾಟ ಇನ್ನಷ್ಟು ಶಕ್ತಿ ಪಡೆಯುತ್ತಿದೆ. ನರಗುಂದದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಲಾವಿದೆ ಲೀಲಾವತಿ, ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಜಲಾಶಯಕ್ಕೆ ಮಹದಾಯಿ ನದಿ ಜೋಡಣೆಯಯಾಗುವವರೆಗೂ ಧರಣಿ ನಿಲ್ಲಸಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ಈ ಭಾಗದಲ್ಲಿ ಏನೇ ¸ಸಮಸ್ಯೆಗಳು ಬಂದರೂ ಅದರ ವಿರುದ್ಧದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಭರವಸೆ ನೀಡಿದರು. ಚಿತ್ರನಟ ವಿನೋದರಾಜ್ ಮಾತನಾಡಿ, ಅನ್ನದಾತ ಭೂಮಿಯಲ್ಲಿ ಹಗಲಿರುಳು ಶ್ರಮವಹಿಸಿ ದುಡಿದು ದೇಶಕ್ಕೆ ಅನ್ನ ನೀಡುತ್ತಾನೆ. ನಮಗೆ ನೀರು ಕೊಡಿ ಎಂದು ಸರ್ಕಾರಕ್ಕೆ ಕೇಳಿದರೆ ರಾಜಕಾರಣಿಗಳು ಕುಂಟು ನೆಪ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು. ಇತ್ತ ನವಲಗುಂದದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರೇಮ್  ನೆಲ-ಜಲ ವಿಷಯದಲ್ಲಿ ಚಿತ್ರರಂಗ ನಿಮ್ಮೊಂದಿಗೆ ಇರುತ್ತದೆ. ಮಹದಾಯಿ ನೀರು ನಮ್ಮ ಹಕ್ಕು, ಅದನ್ನು ಪಡೆಯುವವರಿಗೆ ಹೋರಾಟ ನಿಲ್ಲಿಸುವುದು ಬೇಡ. ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು. ಹಿಂದೆ ಸರಿದ ಬಿಜೆಪಿ: ಕರ್ನಾಟಕದ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಕಾರಣ ಮುಂದೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ ಮನೆ-ಅಂಗಡಿಗಳಿಗೆ ರೈತರುಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಕ್ಕೆ ಪ್ರತಿಯಾಗಿ ಬಿಜೆಪಿ ಸುಮಾರು  ಐದು ದಿನಗಳಿಂದ ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಗುರುವಾರ ದಿಢೀರ್ ಮೊಟಕುಗೊಳಿಸಿದೆ.



ನವಲಗುಂದ ಬಂದ್

ಇಂದು ಮತ್ತೆ ರೈತರು ನವಲಗುಂದ ಬಂದ್ ಕರೆ ನೀಡಿದ್ದರು. ಪ್ರತಿಭಟನಾಮೆರವಣಿಗೆ , ಭಾಷಣ ಮುಗಿದ ಬಳಿಕ ಹೋರಾಟಗಾರರು ನಗರವನ್ನು ಸುತ್ತಿ ಅಂಗಡಿ-ಮುಂಗಟ್ಟೆಗಳನ್ನು ಬಂದ್ ಮಾಡಿಸಿದರು. ಪರಿಸ್ಥಿತಿ ಅರಿತ ವಾಯುವ್ಯ ಸಾರಿಗೆ ಅಧಿಕಾರಿಗಳು ಬಸ್ ಸಾರಿಗೆ ಸ್ಥಗಿತಗೊಳಿಸಿದ್ದರು.ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಗೆ ಮುಳ್ಳು ಒಟ್ಟಿದ್ದರಿಂದ ಯಾವುದೇ ವಾಹನ ಸಂಚರಿಸಲಿಲ್ಲ. ಅಣ್ಣಿಗೇರಿಯಲ್ಲೂ ಬಂದ್ ಆಚರಿಸಲಾಯಿತು. ಕಾಂಗ್ರೆಸ್ ಶಾಸಕ ಸಿ.ಎಸ್.ಶಿವಳ್ಳಿ ನೇತೃತ್ವದಲ್ಲಿ ಕುಂದ-ಗೋಳದ ಸಾವಿರಾರು ರೈತರು ಧಾರವಾಡದ ವರೆಗೆ ಪಾದಯಾತ್ರೆ ನಡೆಸಿದರು. ಗದಗಿನಲ್ಲಿ ಕೆಲವು ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT