ಮಾಜಿ ಕೇಂದ್ರ ಸಚಿವ ಡಾ.ಎಂ.ವಿ.ರಾಜಶೇಖರನ್ ಅವರ 88ನೇ ಹುಟ್ಟುಹಬ್ಬ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಶಿವರಾಜ್ ಪಾಟೀಲ್, ಡಿಆರ್‍ಡಿಒ ಮಹಾನಿರ್ದೇಶಕ ಎಂ.ನಟರಾಜ 
ಜಿಲ್ಲಾ ಸುದ್ದಿ

ಮೇಕ್ ಇನ್ ಇಂಡಿಯಾ ಅನುಷ್ಠಾನಕ್ಕೆ ತಂತ್ರಜ್ಞಾನ ಅಭಿವೃದ್ಧಿ ಅಗತ್ಯ: ಎಂ.ನಟರಾಜನ್

ಕೇಂದ್ರ ಸರ್ಕಾರ `ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಸೂಕ್ತವಾಗಿ ಅನುಷ್ಠಾನಗೊಳಿಸಲು ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಈ ಕ್ಷೇತ್ರದಲ್ಲಿನ ಪರಿಣಿತರು ಹೆಚ್ಚಾಗುವಂತೆ ಮಾಡಬೇಕು ಎಂದು ಡಿಆರ್‍ಡಿಒ...

ಡಾ.ಎಂ.ವಿ.ರಾಜಶೇಖರನ್ ಹುಟ್ಟುಹಬ್ಬದ ವೇಳೆ ಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿಆರ್‍ಡಿಒ ಮಹಾನಿರ್ದೇಶಕ ಡಾ.ನಟರಾಜನ್ ಅಭಿಮತ

ಬೆಂಗಳೂರು:
ಕೇಂದ್ರ ಸರ್ಕಾರ `ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಸೂಕ್ತವಾಗಿ ಅನುಷ್ಠಾನಗೊಳಿಸಲು ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಈ ಕ್ಷೇತ್ರದಲ್ಲಿನ ಪರಿಣಿತರು ಹೆಚ್ಚಾಗುವಂತೆ ಮಾಡಬೇಕು ಎಂದು ಡಿಆರ್‍ಡಿಒ ಮಹಾನಿರ್ದೇಶಕ ಎಂ.ನಟರಾಜನ್ ಅಭಿಪ್ರಾಯಪಟ್ಟರು.

ಡಾ.ಎಂ.ವಿ.ರಾಜಶೇಖರನ್ ಅವರ 88ನೇ ಹುಟ್ಟುಹಬ್ಬದ ಅಂಗವಾಗಿ ಎಂವಿಆರ್ ಪ್ರತಿಷ್ಠಾನ, ಸೋಮವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ'ದಲ್ಲಿ `ಭಾರತ ಉತ್ಪಾದನಾ ಕ್ಷೇತ್ರದಲ್ಲಿ ಯಶಸ್ವಿಯಾಗಲು ವಿಜ್ಞಾನ, ತಂತ್ರಜ್ಞಾನ ಹಾಗೂ ಆಡಳಿತದಲ್ಲಿ ಕೈಗೊಳ್ಳಬೇಕಾದ ಕಾರ್ಯಸೂಚಿ' ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು. ಮೇಕ್ ಇನ್ ಇಂಡಿಯಾ ಮೂಲಕ ದೇಶ ಸ್ವಾವಲಂಬಿಯಾಗಬೇಕು. ಹೊರದೇಶಗಳನ್ನು ಅವಲಂಬಿಸದೆ ಸ್ವಾವಲಂಬಿಯಾಗಿ ಬದುಕಬೇಕು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಆದರೆ ಹೊಸ ವಿಚಾರಗಳಿಗೆ ಕಿಟಕಿಯನ್ನು ಮುಕ್ತವಾಗಿ ತೆರೆದಿಡಬೇಕು ಎಂದೂ ಪ್ರತಿಪಾದಿಸಿದ್ದರು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ವಿಜ್ಞಾನ, ತಂತ್ರಜ್ಞಾನ, ಸಂಪನ್ಮೂಲ ಕ್ರೋಡೀಕರಣದಲ್ಲಿ ಸ್ವಾವಲಂಬಿಯಾಗಬೇಕು.

ಕೃಷಿಯಲ್ಲಿ ಅಭಿವೃದ್ಧಿ, ಶಕ್ತಿಯ ಮೂಲಗಳ ಸಮರ್ಥ ಬಳಕೆ, ತೋಟಗಾರಿಕಾ ಬೆಳೆಗಳ ಅಭಿವೃದ್ಧಿ, ನೀರಿನ ಮರುಬಳಕೆ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ವಿಶ್ವವಿದ್ಯಾಲಯ ಹಾಗೂ ಸರ್ಕಾರದ ಪ್ರಯೋಗಾಲಯಗಳು ಪ್ರಯತ್ನಿಸಬೇಕು. ಕೈಗಾರಿಕೆಗಳು ಮಾರುಕಟ್ಟೆ ಮಾತ್ರ ನೋಡದೆ ಗುಣಮಟ್ಟ ಬೆಳೆಸಲು ಯೋಚಿಸಬೇಕು. ಹೊರದೇಶಗಳು ಬಂದು ಹೂಡಿಕೆ ಮಾಡುವ ಜೊತೆಗೆ ದೇಶೀಯ ಉತ್ಪನ್ನಕ್ಕೂ ವಿದೇಶಗಳಲ್ಲಿ ಮೌಲ್ಯ ದೊರೆಯುವಂತೆ ಮಾಡಬೇಕು ಎಂದರು.

ಬಹುರಾಷ್ಟ್ರೀಯ ಕಂಪನಿಗಳು ಬಂದು ಮಾಡುವ ಹೂಡಿಕೆ ದೇಶದ ಅಗತ್ಯವನ್ನು ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ದೇಶದಲ್ಲಿರುವ ಕೈಗಾರಿಕೆಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಕಚ್ಚಾವಸ್ತುಗಳನ್ನು ಪಡೆಯುವಲ್ಲಿ ದೇಶ ಪೂರ್ಣವಾಗಿ ಸ್ವಾವಲಂಬಿಯಾಗಬೇಕು. ಲಭ್ಯ ಸಂಪನ್ಮೂಲ     ಬಳಸಿಕೊಂಡರೆ ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇತ್ತೀಚೆಗೆ ವಸ್ತುಗಳ ಬೆಲೆಗಳಲ್ಲಿ ಅಸಮಾನತೆ ಕಂಡುಬರುತ್ತಿದೆ. ಈರುಳ್ಳಿಯ ಬೆಲೆ ರು.100 ಇದ್ದರೆ, ಟೊಮೆಟೋ ಬೆಲೆ ರು.2ಕ್ಕೆ ಇಳಿಯುತ್ತದೆ. ಕೈಗಾರಿಕೆಯಲ್ಲಿನ ಸಮಸ್ಯೆಗ ಳಿಂದ ಇಂತಹ ಆರ್ಥಿಕ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದರು.

ನಿವೃತ್ತ ನ್ಯಾ.ಶಿವರಾಜ್ ಪಾಟೀಲ್ ಮಾತನಾಡಿ, ಜನರಲ್ಲಿ ಮನೋರಂಜನೆಯ ಬಗ್ಗೆ ಆಸಕ್ತಿ ಹೆಚ್ಚಿದೆ. ಹೀಗಾಗಿ ಮನೋವಿಕಾಸ ಮಾಡುವ ಕಾರ್ಯಕ್ರಮ ಗಳಿಗೆ ಬರುವ ಪ್ರವೃತ್ತಿ ಕಡಿಮೆಯಾಗಿದೆ. ಸಾರ್ವಜ ನಿಕ ಸಂಸ್ಥೆ ಅಥವಾ ರಾಜಕೀಯದಲ್ಲಿ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ಆದರೆ ಜನರು ಇಂತಹ ಪ್ರಮಾಣ ವಚನಗಳನ್ನು ಪಾಲಿಸುವುದಿಲ್ಲ ಎಂದರು.

ಡಾ.ಎಂ.ವಿ.ರಾಜಶೇಖರನ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಂಸದ ಎಚ್. ಹನುಮಂತಪ್ಪ, ನಿವೃತ್ತ ಅಧಿಕಾರಿ ಡಾ. ಸಿ. ಸೋಮಶೇಖರ್ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿಮಾಚಲದಲ್ಲಿ ಭಾರಿ ಭೂಕುಸಿತ: ಬಸ್‌ ಮೇಲೆಯೇ ಬಿದ್ದ ಪರ್ವತ; ಕನಿಷ್ಠ 18 ಮಂದಿ ಸಾವು

ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಬಿಗ್‌ಬಾಸ್‌ ಸ್ಪರ್ಧಿಗಳು ಹೋಗಿದ್ದೇಲ್ಲಿಗೆ?

ಥಿಯೇಟರ್ ಹಾಗೂ ರಸ್ತೆಗಳಲ್ಲಿ ದೈವದ ಅನುಕರಣೆ ಮಾಡಬೇಡಿ: ಪ್ರೇಕ್ಷಕರಲ್ಲಿ ಕಾಂತಾರ: ಅಧ್ಯಾಯ 1 ಚಿತ್ರತಂಡ ಮನವಿ!

ಸುಪ್ರೀಂಕೋರ್ಟ್ ನಲ್ಲಿ ತಮ್ಮತ್ತ ಶೂ ಎಸೆದಿದ್ದವನಿಗೆ ಕ್ಷಮೆ ನೀಡಿದ CJI

SCROLL FOR NEXT