ಜಿಲ್ಲಾ ಸುದ್ದಿ

ನೈಸ್ ಟೋಲ್ ನಿರ್ಧಾರ ಮುಂದಿನ ಸಭೆಯಲ್ಲಿ

Mainashree

ಬೆಂಗಳೂರು: ನೈಸ್ ರಸ್ತೆ ಅವ್ಯವಹಾರ ಕುರಿತಂತೆ ರಚಿಸಿರುವ ಸದನ ಸಮಿತಿಯು ವರದಿ ಸಲ್ಲಿಕೆಗೆ ಇನ್ನೂ ಮೂರು ತಿಂಗಳು ಕಾಲಾವಕಾಶ ವಿಸ್ತರಿಸುವಂತೆ ಕೋರಲು ನಿರ್ಧರಿಸಿದೆ. ಅದೇ ರೀತಿ, ವಾಹನಗಳಿಂದ ಟೋಲ್ ಸಂಗ್ರಹ ಮಾಡಬೇಕೇ ಬೇಡವೇ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲು ಸಮಿತಿ ತೀರ್ಮಾನಿಸಿದೆ.

ಶನಿವಾರ ವಿಧಾನಸೌಧದಲ್ಲಿ ಸದನ ಸಮಿತಿ ಸಭೆಯ ನಂತರ ಅನೌಪಚಾರಿಕವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ನೈಸ್ ರಸ್ತೆ ಅವ್ಯವಹಾರ ಕುರಿತಾಗಿ ವಿಧಾನಮಂಡಲದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ನಂತರ ಅವ್ಯವಹಾರ ಕುರಿತು ವಸ್ತುಸ್ಥಿತಿ ಅರಿಯಲು ಸದನ ಸಮಿತಿ ರಚಿಸಲಾಗಿತ್ತು.

ಈಗಾಗಲೇ ಸಮಿತಿಯು 15 ಸಭೆ ನಡೆಸಿದೆ ಎಂದರು. ಮಿತಿಗೆ ನೀಡಿದ ಕಾಲಾವಕಾಶ ಈ ತಿಂಗಳಾಂತ್ಯಕ್ಕೆ ಕೊನೆಯಾಗುತ್ತಿದೆ. ಆದರೆ, ವರದಿಯನ್ನು ಪೂರ್ಣಗೊಳಿಸುವ ಉದ್ದೇಶದಿಂದ ಇನ್ನೂ ಮೂರು ತಿಂಗಳು ಅವಧಿ ವಿಸ್ತರಿಸುವಂತೆ ಸದನವನ್ನು ಕೋರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇನ್ನು ಮೂರು-ನಾಲ್ಕು ಸಭೆಯಲ್ಲಿಯೇ ವರದಿ ಅಂತಿಮಗೊಳಿಸಿ ಸ್ಪೀಕರ್ ಅವರಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಇನ್ನೊಂದೆಡೆ ಹೈಕೋರ್ಟ್‍ನ ವಿಶ್ರಾಂತ ನ್ಯಾ.ನಾಗಮೋಹನ್ ದಾಸ್ ಅವರನ್ನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

SCROLL FOR NEXT