ಹಾವೇರಿ: ಕದ್ದು ಮುಚ್ಚಿ ಕುಡಿಯುವ ಭರದಲ್ಲಿ ಕ್ರಿಮಿನಾಶಕ ಬಾಟಲ್‌ನಲ್ಲಿ ಮದ್ಯ ಸೇವಿಸಿ ಮೂವರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಹಾವೇರಿ ಜಿಲ್ಲೆಯ ಗುತ್ತಲ ತಾಂಡದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಗುತ್ತಲ ತಾಂಡದ ಮಹಿಳೆಯರಾದ ರುಕ್ಕವ್ವ(72), ಕಮಲವ್ವ(68) ಹಾಗೂ ಆಕೆಯ ಪುತ್ರಿ ರೇಣುಕವ್ವ(30) ಕ್ರಿಮಿನಾಶಕ ಬಾಟಲ್‌ನಲ್ಲಿ ಮದ್ಯ ತಂದು ಸೇವಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.