ಹಾಸನ/ಮೈಸೂರು: ಗಡಿಭಾಗ ಸಿಯಾಚಿನ್‌ನಲ್ಲಿ ನಡೆದ ಭೀಕರ ಹಿಮಪಾತದಲ್ಲಿ ಕರ್ನಾಟಕದ ಮೂವರು ಯೋಧರು ಸಾವನ್ನಪ್ಪಿದ್ದು. ಧಾರವಾಡ ತಾಲೂಕಿನ ಕುಂದುಗೋಳದ ಬೆಟದೂರು ಮೃತಯೋಧ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ್ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತಲುಪಿದೆ.
ದುರಂತ ಎಂದರೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಯೋಧ ಪಿ.ಎನ್. ಮಹೇಶ್ ಹಾಗೂ ಹಾಸನ ತಾಲೂಕು ತೇಜೂರು ಗ್ರಾಮದ ಟಿ.ಟಿ.ನಾಗೇಶ್ ಅವರ ಮೃತದೇಹಗಳು ಇನ್ನೂ ಕುಟುಂಬದವರಿಗೆ ಸಿಕ್ಕಿಲ್ಲ.
ಸಿಯಾಚಿನ್ ಹಿಮಪಾತದಲ್ಲಿ ಮೃತಪಟ್ಟ ಹಾಸನ ತಾಲೂಕು ತೇಜೂರು ಗ್ರಾಮದ ಟಿ.ಟಿ.ನಾಗೇಶ್ ಅವರ ಮೃತದೇಹ ಇನ್ನೂ ಸಿಯಾಚಿನ್‌ನಲ್ಲೇ ಇದ್ದು, 2-3 ದಿನಗಳಲ್ಲಿ ತವರಿಗೆ ಬರುವ ನಿರೀಕ್ಷೆಯಿದೆ. ಅವರ ಅಂತ್ಯ ಸಂಸ್ಕಾರಕ್ಕೆ ಹುಟ್ಟೂರಿನಲ್ಲಿ ಸಕಲ ವ್ಯವಸ್ಥೆ ಮಾಡಿಕೊಂಡಿರುವ ಕುಟುಂಬ ಸದಸ್ಯರು, ಮೃತದೇಹಕ್ಕಾಗಿ ಕಾಯುತ್ತಿದ್ದಾರೆ.