ತ್ರಿಶಾ 
ಜಿಲ್ಲಾ ಸುದ್ದಿ

ಬೆಂಗಳೂರು: ಆಟವಾಡಲು ಹೋದ 3 ವರ್ಷದ ಮಗು ಶವವಾಗಿ ಪತ್ತೆ

ಆಟವಾಡಲು ಹೋದ ಮಗುವೊಂದು ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಆರ್ ಟಿ ನಗರದಲ್ಲಿರುವ ಗೋಪಾಲಪ್ಪ ಪಾಳ್ಯದಲ್ಲಿ ನಡೆದಿದೆ....

ಬೆಂಗಳೂರು:  ಆಟವಾಡಲು ಹೋದ ಮಗುವೊಂದು ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಆರ್ ಟಿ ನಗರದಲ್ಲಿರುವ ಗೋಪಾಲಪ್ಪ ಪಾಳ್ಯದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ವಿಜಯ್ ಮಮತ್ತು ಸೀಮಾ ಇತ್ತೀಚೆಗಷ್ಟೇ ಗೋಪಾಲಪ್ಪ ಪಾಳ್ಯದ ಮನೆಗೆ ಶಿಫ್ಟ್ ಆಗಿದ್ದರು. ಗುರುವಾರ ಬೆಳಗ್ಗೆ ಈ ದಂಪತಿಯ ಮೂರು ವರ್ಷದ ಮಗು ತ್ರಿಷಾ ಮನೆಯ ಮುಂದೆ ಆಟವಾಡಲು ಹೋಗಿತ್ತು. ಆದರೆ ಸಂಜೆ ಆದರೂ ವಾಪಸ್ ಆಗಿರಲಿಲ್ಲ. ತಾಯಿ ಎಲ್ಲೆಡೆ ಹುಡುಕಾಡಿದರು ಮಗು ಸಿಗಲಿಲ್ಲ.

ಬ್ರಿಗೇಡ್ ರೋಡ್ ನ ಹೊಟೇಲ್ ವೊಂದರಲ್ಲಿ ಅಡುಗೆ ಕೆಲಸ ಮಾಡುವ ವಿಜಯ್ ಕೆಲಸ ಮುಗಿಸಿ ತಡರಾತ್ರಿ ಮನೆಗೆ ಬಂದಿದ್ದಾರೆ. ನಂತರ ದಂಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಮಗುವಿಗಾಗಿ ಹುಡಾಕಾಟ ನಡೆಸಿದಾಗ ದಂಪತಿಯ ಮನೆಯ ಪಕ್ಕದಲ್ಲೇ ಇದ್ದ ಕಸದ ರಾಶಿಯಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಮಗು ಉಸಿರು ಕಟ್ಟಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT