ಟಿ.ಟಿ ನಾಗೇಶ್ 
ಜಿಲ್ಲಾ ಸುದ್ದಿ

ಸಿಯಾಚಿನ್ ನಲ್ಲಿ ಮಡಿದ ಯೋಧ ನಾಗೇಶ್ ಗೆ ಕಣ್ಣೀರ ವಿದಾಯ

ಸಿಯಾಚಿನ್‌ನಲ್ಲಿ ದುರಂತದಲ್ಲಿ ಮಡಿದ ಯೋಧ ಹಾಸನದ ತೇಜೂರಿನ ಟಿ.ಟಿ.ನಾಗೇಶ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಸಾವಿರಾರು ಅಭಿಮಾನಿಗಳು ಹುತಾತ್ಮ ..

ಹಾಸನ: ಸಿಯಾಚಿನ್‌ನಲ್ಲಿ ದುರಂತದಲ್ಲಿ ಮಡಿದ ಯೋಧ ಹಾಸನದ  ತೇಜೂರಿನ ಟಿ.ಟಿ.ನಾಗೇಶ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಸಾವಿರಾರು ಅಭಿಮಾನಿಗಳು ಹುತಾತ್ಮ ಯೋಧನಿಗೆ ಅಶ್ರುತರ್ಪಣ ಸಲ್ಲಿಸಿದರು.

ಸೋಮವಾರ ರಾತ್ರಿ ಮೃತ ಯೋಧಮ ದೇಹವನ್ನು ಹಾಸನದ ವೈದ್ಯಕೀಯ ಕಾಲೇಜಿನಲ್ಲಿ ಇರಿಸಿ ಇಂದು ಬೆಳಗ್ಗಿನಿಂದಲೇ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪಾರ್ಥಿವ ಶರೀರದ ಜತೆ ಬಂದಿದ್ದ ಸೇನೆಯ ಅಧಿಕಾರಿಗಳು ಸರಕಾರಿ ಗೌರವ ಸಲ್ಲಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಗೃಹ ಸಚಿವ ಡಾ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಶಾಸಕ ಹೆಚ್.ಎಸ್.ಪ್ರಕಾಶ್,  ಸೇರಿದಂತೆ ಹಲವು ಗಣ್ಯರು ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಮತ ಯೋಧನ ಪತ್ನಿ ಆಶಾ ಜತೆಗೆ ಹಲವು ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು

ಗೃಹ ಸಚಿವ ಡಾ.ಪರಮೇಶ್ವರ್ ಮಾತನಾಡಿ, ಹುತಾತ್ಮ ಯೋಧ ನಾಗೇಶ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಗಿದೆ, ಅಲ್ಲದೆ 4 ಎಕರೆ ಭೂಮಿ, ಒಂದು ನಿವೇಶನ, ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕೊಡಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ