ಹೊಸ ವರ್ಷಾಚರಣೆ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿಗಳಾದ ಸೋನಿಯಾ ನಾರಂಗ್ ಮತ್ತು ಪ್ರವೀಣ್ ಸೂದ್ ಪರಸ್ಪರ ಶುಭಾಶಯ ಕೋರಿಕೊಂಡರು. 
ಜಿಲ್ಲಾ ಸುದ್ದಿ

ನಾರಂಗ್ ಈಗ ಸಿಐಡಿ ಡಿಐಜಿ ಮಾಲಿನಿ ಕೃಷ್ಣಮೂರ್ತಿ ಲೋಕಾಯುಕ್ತ ಎಸ್‍ಐಟಿ ಐಜಿಪಿ

ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ...

ಬೆಂಗಳೂರು: ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯದ  ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆದು ದೇಶವ್ಯಾಪಿ  ಸುದ್ದಿ ಮಾಡಿದ್ದ ಲೋಕಾಯುಕ್ತ ಸಂಸ್ಥೆಯ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಬಡ್ತಿ ನೀಡಿ  ಸಿಐಡಿ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಜತೆಗೆ ಲೋಕಾಯುಕ್ತದಲ್ಲಿ ಎಸ್‍ಐಟಿ ಐಜಿಪಿಯಾಗಿದ್ದ ಚರಣ್ ರೆಡ್ಡಿ ಅವರನ್ನು ಬೆಂಗಳೂರು  ನಗರದ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ, ಕೆಎಸ್ಆರ್‍ಪಿ  ಐಜಿಪಿಯಾಗಿದ್ದ  ಮಾಲಿನಿ ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಎಸ್‍ಐಟಿ ಮುಖ್ಯಸ್ಥರನ್ನಾಗಿ ಹಾಗೂ ಬೆಂಗಳೂರು ನಗರ ಡಿಸಿಪಿಯಾಗಿದ್ದ ರೋಹಿಣಿ ಸೇಪಟ್ ಅವರನ್ನು ಲೋಕಾಯುಕ್ತದ ವಿಶೇಷ ತನಿಖಾ ದಳದ (ಎಸ್ ಐಟಿ)ಎಸ್‍ಪಿಯಾಗಿ ನೇಮಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಜತೆಗೆ ಸೋನಿಯಾ ನಾರಂಗ್ ಸ್ಥಾನಕ್ಕೆ ಬೆಂಗಳೂರು ಡಿಸಿಪಿ (ಅಪರಾಧ)  ಆಗಿದ್ದ ಆರ್.ರಮೇಶ್ ಅವರನ್ನು ನೇಮಿಸಲಾಗಿದೆ.ಈ ಬೆಳವಣಿಗೆಯೊಂದಿಗೆ  ಲೋಕಾಯುಕ್ತದಲ್ಲಿ  ಮೂರು ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳು ಬದಲಾಗಿದ್ದಾರೆ.

ಇದರೊಂದಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ರ್ವಹಿಸುತ್ತಿದ್ದ  30 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು, 25 ಅಧಿಕಾರಿಗಳನ್ನು  ವರ್ಗಾವಣೆ ಮಾಡಲಾಗಿದೆ. ಇನ್ನಿಬ್ಬರು ಹುದ್ದೆ ನಿರೀಕ್ಷೆಯಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಗಿದೆ. 

ಬೆಂಗಳೂರಿನಲ್ಲಿ ಹೆಡ್‍ಕ್ವಾಟರ್-1 ಹುದ್ದೆಯಲ್ಲಿದ್ದ ಐಜಿಪಿ ಆರ್.ಹಿತೇಂದ್ರ ಅವರನ್ನು   ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರ (ಆಡಳಿತ) ಹುದ್ದೆಗೆ ಹಾಗೂ ಸಿಐಡಿ ಐಜಿಪಿಯಾಗಿದ್ದ  ಕೆ.ವಿ.ಶರತ್ ಚಂದ್ರ ಅವರನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು ಅಪರಾಧ), ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು (ಆಡಳಿತ) ಹುದ್ದೆಯಲ್ಲಿದ್ದ  ಬಿ.ಎನ್.ಎಸ್.ರೆಡ್ಡಿ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಐಜಿಪಿಯಾಗಿ ವರ್ಗಾಯಿಸಲಾಗಿದೆ.

ಕೆಎಸ್‍ಆರ್‍ಟಿಸಿಯ ಭದ್ರತೆ, ಜಾಗೃದ ದಳದ ನಿರ್ದೇಶಕರಾಗಿದ್ದ ಡಿಐಜಿ ಸೋಮೇಂದ್ರ  ಮುಖರ್ಜಿ ಅವರನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು, ಬೆಳಗಾವಿ ಅಯುಕ್ತರಾಗಿದ್ದ  ಎಸ್.ರವಿ ಅವರನ್ನು ಕೆಎಸ್ ಆರ್‍ಪಿಯ ಐಜಿಪಿ, ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರಾಗಿದ್ದ (ಅಪರಾಧ) ಎಂ.ಚಂದ್ರಶೇಖರ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತರು, ಬೆಂಗಳೂರಿನಲ್ಲಿ ಪೊಲೀಸ್ ತರಬೇತಿ ಡಿಐಜಿಯಾಗಿದ್ದ ಬಿ.ಶಿವಕುಮಾರ್ ಅವರನ್ನು ಕಲುಬುರ್ಗಿ ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ.

ಆರ್ಥಿಕ ಅಪರಾಧಗಳ  ಡಿಐಜಿಯಾಗಿದ್ದ ಎಂ.ಹೇಮಂತ್ ನಿಂಬಾಳ್ಕರ್ ಅವರಿಗೆ ಬಡ್ತಿ ನೀಡಿ  ಆರ್ಥಿಕ ಅಪರಾಧ (ಸಿಐಡಿ)ಯ ಐಜಿಪಿಯಾಗಿ ನೇಮಿಸಲಾಗಿದೆ. ನವದೆಹಲಿಯ ಗುಪ್ತದಳದ  ಐಬಿ) ಸಹಾಯಕ ನಿರ್ದೇಶಕರಾಗಿರುವ ಪಂಕಜ್‍ಕುಮಾರ್ ಠಾಕೂರ್ ಹಾಗೂ ಮನೀಶ್  ಖರ್ಬಿಕರ್‍ಗೆ ಐಜಿಪಿ ಹುದ್ದೆಗೆ ಬಡ್ತಿ ನೀಡಿ ಅಲ್ಲಿ ಮುಂದುವರಿಸಲಾಗಿದೆ.ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ನಿಯೋಜಿಸಿರುವ ಸ್ಥಳಗಳನ್ನು ಅವರ ಹೆಸರಿನ ಮುಂದೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!