ಬೆಂಗಳೂರು: ಜನರ ಬಾಯಲ್ಲಿ ನೀರೂರಿಸುವ ಅವರೆ ಮೇಳ ಜ.7ರಿಂದ 24ರವರೆಗೆ ಸಜ್ಜನ್ ರಾವ್ ವೃತ್ತ ದಲ್ಲಿ ನಡೆಯಲಿದೆ. ಅವರೆಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳು ಜನರನ್ನು ಬರಸೆಳೆಯಲಿದೆ.
ಈ ಬಾರಿ ಹಿತಕಬೇಳೆ ಕಷಾಯ ಹೊಸ ಬಗೆಯದಾಗಿದೆ. ಸುಮಾರು 500ಜನ ರೈತರು ನೇರವಾಗಿ ಪಾಲ್ಗೊಳ್ಳಲಿದ್ದಾರೆ. ಮೇಳವನ್ನು ಶಾಸಕ ಆರ್.ವಿ. ದೇವರಾಜ್ ಉದ್ಘಾಟಿಸಲಿದ್ದು, ಸಚಿವ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಬಿಬಿಎಂಪಿ ಸದಸ್ಯೆ ವಾಣಿ ವಿ ರಾವ್, ಸಮಾಜ ಸೇವಕಿ ಮಮತಾ ದೇವರಾಜ್ ನಟ ಯಶ್, ಪ್ರಜ್ವಲ್ ದೇವರಾಜ್ ಆಗಮಿಸಲಿದ್ದಾರೆ. ಅವರೆ ಬೆಳೆಗಾರರಿಗೆ ಅನುಕೂಲ ಮಾಡುವ ಉದ್ದೇಶದಿಂದ ಮೇಳ ಆರಂಭಿಸಿದ್ದೇವೆ ಎಂದು ಗೀತಾ ಶಿವಕುಮಾರ್ ತಿಳಿಸಿದರು.