(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಗುತ್ತಿಗೆದಾರರ ವಿರುದ್ಧ ಗಾಂಧಿಗಿರಿ

ಉತ್ತರಹಳ್ಳಿಯ ನಾಗರಿಕರ ಪಾಲಿಗೆ ತಲೆ ನೋವಾಗಿ ಪರಿಣಮಿಸಿರುವ ಅಕ್ರಮ ಕಸವಿಲೇವಾರಿ ವಿರುದ್ಧ ಕಾರ್ಪೊರೇಟರ್ ಎಚ್. ಹನುಮಂತಯ್ಯ ಗಾಂಧಿಗಿರಿ ನಡೆಸಲು ಮುಂದಾಗಿದ್ದಾರೆ...

ಬೆಂಗಳೂರು: ಉತ್ತರಹಳ್ಳಿಯ ನಾಗರಿಕರ ಪಾಲಿಗೆ ತಲೆ ನೋವಾಗಿ ಪರಿಣಮಿಸಿರುವ ಅಕ್ರಮ ಕಸವಿಲೇವಾರಿ ವಿರುದ್ಧ ಕಾರ್ಪೊರೇಟರ್ ಎಚ್. ಹನುಮಂತಯ್ಯ ಗಾಂಧಿಗಿರಿ ನಡೆಸಲು ಮುಂದಾಗಿದ್ದಾರೆ.

ಉತ್ತರಹಳ್ಳಿ ಮುಖ್ಯ ರಸ್ತೆಯ ವಸತಿ ಪ್ರದೇಶದಲ್ಲೇ ಅಕ್ರಮವಾಗಿ ಕಸ ಸುರಿಯುತ್ತಿರುವ ಗುತ್ತಿಗೆದಾರರಿಗೆ ಅವರು ಪಾಠ ಕಲಿಸಲು ಹೊರಟಿದ್ದಾರೆ. ಈ ಪ್ರಯತ್ನಕ್ಕೆ `ನಮ್ಮ ಬೆಂಗಳೂರು ಪ್ರತಿಷ್ಠಾನ' ಕೂಡ ಬೆಂಬಲ ಸೂಚಿಸಿದೆ.

ಉತ್ತರಹಳ್ಳಿಯ ಹೊರಗಿನ ಗುತ್ತಿಗೆದಾರರು ವಾರ್ಡ್ 184ರಲ್ಲಿ ಅಕ್ರಮವಾಗಿ ಕಸ ತಂದು ಸುರಿಯುತ್ತಿದ್ದು, ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾವಲುಗಾರರನ್ನು
ನೇಮಿಸಿದರೂ ಗುತ್ತಿಗೆದಾರರು ಬಲಪ್ರದರ್ಶಿಸಿ ಕಸ ಸುರಿದು ಹೋಗುತ್ತಿದ್ದರು. ಕಸದ ಸಮಸ್ಯೆ ನಾಗರಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಕಾರ್ಪೊರೇಟರ್
ಎಚ್. ಹನುಮಂತಯ್ಯ ಗಾಂಧಿಗಿರಿಯ ಮೊರೆ ಹೋಗಿದ್ದಾರೆ.

ನಮ್ಮ ಕಸವನ್ನೇ ಸುರಿಯುತ್ತಿಲ್ಲ

ಉತ್ತರಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಒಟ್ಟು 203 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 63 ಸಾವಿರ ಮನೆಗಳಿವೆ. ಪ್ರತಿ ನಿತ್ಯ 20ಟನ್‍ಗಳಷ್ಟು ತ್ಯಾಜ್ಯವನ್ನು ಚಿಕ್ಕನಾಗಮಂಗಳಕ್ಕೆ ಕೊಂಡೊಯ್ಯುತ್ತಾರೆ. ನಮ್ಮ ವಾಡ್ರ್ ನ ಕಸವನ್ನೇ ಇಲ್ಲಿ ಹಾಕುವುದಿಲ್ಲ. ಎಲ್ಲಿಂದಲೋ ಬಂದು ಗುತ್ತಿಗೆದಾರರು ಇಲ್ಲಿ ಕಸ ವಿಲೇವಾರಿ ಮಾಡಿದರೆ ಹೇಗೆ ಸುಮ್ಮನೆ ಕೂರಲು ಸಾಧ್ಯ ಎಂದು ಕಾರ್ಪೊರೇಟರ್ ಎಚ್. ಹನುಮಂತಯ್ಯ ಪ್ರತಿಕ್ರಿಯಿೆ ನೀಡಿದ್ದಾರೆ

ಮಾದರಿ ವಾರ್ಡ್
ಈಗಾಗಲೇ `ನಮ್ಮ ಬೆಂಗಳೂರು ಪ್ರತಿಷ್ಠಾನ' ನಾಗರಿಕ ಸಹಭಾಗಿತ್ವ ದೊಂದಿಗೆ ಒಟ್ಟು 12 ವಾರ್ಡ್‍ಗಳನ್ನು ಮಾದರಿ ವಾರ್ಡ್ ಗಳನ್ನಾಗಿ ಮಾಡುವ ಗುರಿಹೊಂದಿದ್ದು, ಅದರ
ಭಾಗವಾಗಿ ಕತ್ರಿಗುಪ್ಪೆ ಹಾಗೂ ಬಾಣಸವಾಡಿಯಲ್ಲಿ ಕೆಲಸ ಆರಂಭವಾಗಿದೆ. ಇದರ ಇನ್ನೊಂದು ಭಾಗವಾಗಿ ಉತ್ತರಹಳ್ಳಿಯನ್ನು ಮಾದರಿ ವಾರ್ಡ್ ಅನ್ನಾಗಿ ರೂಪಿಸಲು ನೆರವು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಹನುಮತಯ್ಯ ಅವರ ಪ್ರಯತ್ನಕ್ಕೆ ಪ್ರತಿಷ್ಠಾನ ಬೆಂಬಲ ನೀಡಲು ನಿರ್ಧರಿಸಿದೆ.

ಏನೇನು ಕ್ರಮ?

  • ಈಗಾಗಲೇ ಸುರಿದಿರುವ ಕಸವನ್ನು ಸಮತಟ್ಟು ಮಾಡಿ, ಭೂಮಿಯೊಳಗೆ ಹಾಕಿ ಕಸದ ವಾಹನ ಬರದಂತೆ ಕ್ರಮ.
  • ಈ ಪ್ರದೇಶದಲ್ಲಿ ವಾರದೊಳಗೆ 8 ಸಿಸಿ ಕ್ಯಾಮೆರಾ ಅಳವಡಿಸಿ ನಿರಂತರ ಕಾವಲಿಗೆ ನಿರ್ಧಾರ
  • ಲಾರಿ ಬರುವ ದಾರಿಗೆ ಅಡ್ಡವಾಗಿ ವಿ ಆಕಾರದಲ್ಲಿ ಗಿಡ ನೆಟ್ಟು ಬೆಳೆಸಲು ಮುಂದಾದ ಪ್ರತಿಷ್ಠಾನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT