ಜಿಲ್ಲಾ ಸುದ್ದಿ

ಕ್ಷಾತ್ರ ಗುಣದಿಂದ ದೇಶಕ್ಕೆ ಕುತ್ತು

Manjula VN

ಬೆಂಗಳೂರು: ಕ್ಷಾತ್ರ ಗುಣದಿಂದ ದೇಶಕ್ಕೆ ಮತ್ತು ಮಾನವ ಕುಲಕ್ಕೆ ಎಂದೆಂದಿಗೂ ಕುತ್ತು ಖಚಿತ ಎಂದು ನಾಟಕಕಾರ ಡಾ.ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಶನಿವಾರ ನಗರದ ಯವನಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಕುರ ಪ್ರಕಾಶನವು ಹೊರತಂದಿರುವ ಲೇಖಕ ಜಯರಾಮ್ ರಾಯಪುರ ವಿರಚಿತ ಕೆಂಪೇಗೌಡ ಜೀವನಾಧಾರಿತ `ಸಿರಿಗೆ ಸೆರೆ' ನಾಟಕ ಕೃತಿಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ರನ್ನ ತನ್ನ ಗದಾಯುದ್ಧ ಕೃತಿಯಲ್ಲಿ ಈ ಬಗ್ಗೆ ವಿವರಿಸಿದ್ದಾನೆ. ಕ್ಷಾತ್ರ ಯುದ್ಧವನ್ನಷ್ಟೇ ಗೆಲ್ಲುತ್ತದೆ. ಆದರೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರಲ್ಲಿ ಕ್ಷಾತ್ರ ಗುಣಕ್ಕಿಂತ ಹೆಂಗರಳುತನವಿತ್ತು. ಕ್ಷಾತ್ರ ಗುಣ ಮಾನವ ಕುಲಕ್ಕೆ ಕಂಟಕವಾಗಿದ್ದರಿಂದಲೇ ಕೆಂಪೇಗೌಡರ ಹೆಂಗರಳುತನ ಉದಾತ್ತತೆಯನ್ನು ತೋರಿಸುತ್ತ ದೆ ಎಂದರು.

ಕನ್ನಡದ ಸಾಹಿತಿಗಳಾದ ಕುವೆಂಪು, ಕಾರಂತರ ಕೃತಿಗಳು ಕೇವಲ ಸಾಹಿತ್ಯ ಕೃತಿಗಳಾಗಿಲ್ಲದೆ ಸಾಂಸ್ಕೃತಿಕ ಸತ್ಯದ ಅನ್ವೇಷಣೆಯಾಗಿರುತ್ತಿತ್ತು. ಕನ್ನಡದ ಸಾಹಿತ್ಯ ಬಹುಮುಖತ್ವದ ಹಿನ್ನೆಲೆಯನ್ನು ಹೊಂದಿದೆ. ರಾಮಾಯಣದಲ್ಲಿ ಶ್ರೀರಾಮನಿಗೆ ಬಿಲ್ಲನ್ನು ಹಿಡಿಸಲಾಗಿದ್ದರೆ, ಮತ್ತೊಂದು ಪಾತ್ರದಲ್ಲಿ ಆತ ನಿರ್ಧನುನಾಗಿದ್ದಾನೆ. ಕೆಂಪೇಗೌಡ ರಾಜ್ಯ ಸ್ಥಾಪನೆ ವೇಳೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡಿದ್ದ ಎಂದರು. ಕನ್ನಡ ಸಾಹಿತ್ಯ ದಲ್ಲಿ ಇತ್ತೀಚೆಗೆ ಉತ್ತಮ ನಾಟಕಗಳ ಕೃತಿಗಳ ರಚನೆ ಕಡಿಮೆಯಾಗುತ್ತಿದೆ. ಹೊಸ ನಾಟಕಕಾರರು ಸೇರಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಿವಪ್ರಕಾಶ್ ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾ. ಎಂ.ಎನ್. ವೆಂಕಟಾಚಲಯ್ಯ, ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ, ಲೇಖಕ ಜಯರಾಮ್ ರಾಯ್ ಪುರ, ಪ್ರಕಾಶಕ ಚಂದ್ರಕಾಂತ ವಡ್ಡು ಉಪಸ್ಥಿತರಿದ್ದರು.

SCROLL FOR NEXT