ಬೆಂಗಳೂರು: ಇಪ್ಪತ್ತನೇ ಶತಮಾನದಲ್ಲಿ ಜನರ ಮನಸ್ಸನ್ನು ಹೆಚ್ಚು ಗೆದ್ದವರು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು. ರಂಗ ಕಲಾವಿದರು ಪರಕಾಯ ಪ್ರವೇಶ ಮಾಡುವ ಕ್ರಮ ವಿಸ್ಮಯಕಾರಿಯಾದುದು ಎಂದು ಸಾಹಿತಿ ಡಾ. ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ಪ್ರತಿಮಾ ರಂಗಸಂಶೋಧನಾ ಪ್ರತಿಷ್ಠಾನ ಏರ್ಪಡಿಸಿದ್ದ ಸಮಾರಂಭದಲ್ಲಿ 'ಈ ಮಾಸ ನಾಟಕದ ಸುಭದ್ರಮ್ಮ ಮನ್ಸೂರು ವಿಶೇಷಾಂಕ' ಬಿಡುಗಡೆ ಮಾಡಿ ಮಾತನಾಡಿದ ಅವರು ರಂಗಭೂಮಿ ಕಲಾವಿದರ ಕುರಿತ ಅಧ್ಯಯನ ನಡೆಯಬೇಕು. ನಟ ನಟಿಯರ ಕುರಿತ ಇಂತಹ ವಿಸ್ಮಯವನ್ನು ವಿಶ್ಲೇಷಿಸಿ ಪುಸ್ತಕ ರಚಿಸಿ ಮುಂದಿನ ತಲೆಮಾರಿಗೆ ತಲುಪಿಸಬೇಕಿದೆ ಎಂದರು.
ವೃತ್ತಿ ಕಲಾವಿದೆ ಸುಭದ್ರಮ್ಮ ಮನ್ಸೂರು ನಟಿಸಿದ್ದಾರೆಂ ದರೆ ಅವರ ಪಾತ್ರ ನೋಡಲು ಜನ ಜಾತ್ರೆಯಂತೆ ನೆರೆಯುತ್ತಿದ್ದರು.
ಹವ್ಯಾಸಿ ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಈ ಮಾಸ ನಾಟಕ ಪತ್ರಿಕೆ ಸಂಪಾದಕರ ಬರವಣಿಗೆಯಲ್ಲಿ ಅತಿಶಯೋಕ್ತಿ ಇದೆಯೇನೋ ಅನಿಸಿದರೂ ಅದರೊಳಗಿನ ಔದಾರ್ಯ ಬಹಳ ಮುಖ್ಯವಾದುದು. ಇದರಿಂದ ವೃತ್ತಿರಂಗ ಭೂಮಿಗೆ ಬಹು ದೊಡ್ಡ ಲಾಭವಾಗಿದೆ. ಇವರಿಂದಾಗಿ ಕಡೆಗಣಿಸಲ್ಪಟ್ಟಿದ್ದ ಕ್ಷೇತ್ರ ಮುಖ್ಯ ವಾಹಿನಿಗೆ ಬರುವಂತಾಗಿದೆ ಎಂದರು. `ಈ ಮಾಸ ನಾಟಕ' ರಂಗಭೂಮಿಯ ತಿಂಗಳ ಪತ್ರಿಕೆ ಬಿ.ವಿ. ಕಾರಂತ, ಶ್ರೀರಂಗ, ಜಿ.ಬಿ.ಜೋಶಿಯವರ ಕುರಿತು ವಿಶೇಷ ಸಂಚಿಕೆ ಹೊರತಂದಿದೆ. ಅವರೆಲ್ಲ ನಾಟಕಕಾರರು ಹಾಗೂ ನಿರ್ದೇಶಕರು. ಇದೇ ಪ್ರಥಮ ಬಾರಿಗೆ ಖ್ಯಾತ ನಟಿ ಸುಭದ್ರಮ್ಮ ಬಗ್ಗೆ ವಿಶೇಷ ಸಂಚಿಕೆ ಹೊರತಂದಿರುವುದು ಶ್ಲಾಘನೀಯ. ಸುಭದ್ರಮ್ಮ ತುಂಬಾ ಸರಳರು, ಮುಗಟಛಿರು ಎಂದು ಹೇಳುತ್ತಾರೆ. ಆದರೆ ಇಂತಹ ಅಪೂರ್ವ ನಟನೆ ಸರಳತೆಯಿಂದ ಸಾಧ್ಯವಿಲ್ಲ. ಪ್ರಬುದಟಛಿ ಮತ್ತು ಗಾಢ ವ್ಯಕ್ತಿತ್ವ ಇದ್ದರೆ ಮಾತ್ರ ಇಂತಹ ನಟನೆ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಸಿದ್ದ ರಂಗತಜ್ಞ ಡಾ. ಎಚ್ .ಎ.ಪಾಶ್ರ್ವನಾಥ್ ಮಾತನಾಡಿ, ಕನ್ನಡ ರಂಗಭೂಮಿ ಇತಿಹಾಸದಲ್ಲಿ ಮಹಿಳಾ ಕಲಾವಿದರ ಕೊಡುಗೆ ಅನನ್ಯವಾಗಿದ್ದು, ಅವರ ಪೈಕಿ ಸುಭದ್ರಮ್ಮ ಮನ್ಸೂರು ಹಾಗೂ ಅವರ ಪತಿ ಲಿಂಗರಾಜ ಮನ್ಸೂರರ ಕೊಡುಗೆ ಅನುಪಮವಾದುದು ಎಂದು ಸ್ಮರಿಸಿದರು. ಸಮಾರಂ ಭದ ಕೇಂದ್ರಬಿಂದು ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರು ರಂಗಗೀತೆ ಹಾಡಿದರು. ಪತ್ರಿಕೆ ಸಂಪಾದಕ ಗುಡಿಹಳ್ಳಿ ನಾಗರಾಜ ಪ್ರಾಸ್ತಾಕ ಮಾತುಗಳ ನ್ನಾಡಿದರು. ಹೆಸರಾಂತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ರಂಗ ಸಂಘಟಕ ನಾಟಕ ಮನೆ ಮಹಾಲಿಂಗು, ಲೇಖಕ ರುದ್ರೇಶ್ ಪಾಲ್ಗೊಂಡಿದ್ದರು.