ಜಿಲ್ಲಾ ಸುದ್ದಿ

ಜಲಮಂಡಳಿ 1964ರ ಕಾಯ್ದೆ ತಿದ್ದುಪಡಿ: ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ

Manjula VN

ಬೆಂಗಳೂರು: ಬೆಂಗಳೂರು ಜಲಮಂಡಳಿ ಇತ್ತೀಚೆಗೆ ಮಂಡಳಿಯ 1964ರ ಕಾಯ್ದೆಯ ಕೆಲವು ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಸಾರ್ವಜನಿಕರಿಂದ ತಿದ್ದುಪಡಿಗೆ ಸಂಬಂಧಿಸಿದ
ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

ಬೆಂಗಳೂರು ಜಲಮಂಡಳಿ 1964ರ ಕಾಯ್ದೆಯ ಮಳೆನೀರು ಕೊಯ್ಲು, ಪ್ರೊರೇಟಾ ಶುಲ್ಕ, ಮಹಾನಗರ ಪಾಲಿಕೆ ನೀಡುವ ಸ್ವಾಧಿೀನ ಪತ್ರಸಲ್ಲಿಸುವುದು, ಮಾಪನ ಸೇವಾ ಶುಲ್ಕ, ಅನಧಿಕೃತ ಸಂಪರ್ಕಗಳಿಗೆ ದಂಡ ಶುಲ್ಕ, 20ಕ್ಕೂ ಹೆಚ್ಚು ಮನೆಗಳಿರುವ ಫ್ಲ್ಯಾಟ್‍ಗಳಲ್ಲಿ ಉಭಯ ಕೊಳಚೆ ವ್ಯವಸ್ಥೆ ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕಗಳ ಅಳವಡಿಕೆ
ನಿಯಮಗಳಿಗೆ ತಿದ್ದುಪಡಿ ತಂದಿದೆ.

ಪ್ರೊರೇಟಾ ಶುಲ್ಕವನ್ನು ಈ ಹಿಂದೆ ವಾಸದ ಕಟ್ಟಡವು ನೆಲ ಹಾಗೂ ಒಂದು ಅಂತಸ್ತು ಇದ್ದರೆ ಪಾವತಿಸುವಂತಿರಲಿಲ್ಲ. ಬಳಿಕ ಅಂತಸ್ತಿನ ಪ್ರತಿ ಚದರ ಮೀಟರ್‍ಗೆ ರು.150, ವಸತಿ ಸಮುಚ್ಚಯಗಳಿಗೆ ರು.200 ವಸತಿಯೇತರ ಹಾಗೂ ವಾಣಿಜ್ಯ ಕಟ್ಟಡಗಳಿಗೆ ರು.300 ವಿಧಿಸಲಾಗಿದ್ದ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಕರಡು ತಿದ್ದುಪಡಿ ಮಾಹಿತಿಯನ್ನು ಜ.13ರ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಪ್ರಕಟಗೊಂಡ 30 ದಿನಗಳೊಳಗೆ ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾವೇರಿ ಭವನ, ಕೆ.ಜಿ.ರಸ್ತೆ ಇಲ್ಲಿಗೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT