ರಾಮಲಿಂಗಾ ರೆಡ್ಡಿ 
ಜಿಲ್ಲಾ ಸುದ್ದಿ

8 ಲಕ್ಷ ಕಿ.ಮೀ ಓಡಿರುವ ಬಸ್ಸುಗಳು ಗುಜರಿಗೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ

: ಪ್ರಸಕ್ತ ಸಾಲಿನಲ್ಲಿ ಸಾರಿಗೆ ಇಲಾಖೆಯು ಮೂರು ಸಾವಿರ ಹೊಸ ಬಸ್ಸುಗಳನ್ನು ಖರೀದಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ...

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಸಾರಿಗೆ ಇಲಾಖೆಯು ಮೂರು ಸಾವಿರ ಹೊಸ ಬಸ್ಸುಗಳನ್ನು ಖರೀದಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಸ್ಸಾರ್ಟಿಸಿಗೆ 986, ಬಿಎಂಟಿಸಿಗೆ 658, ಎನ್ ಇಆರ್‍ಟಿಸಿಗೆ 702, ಎನ್‍ಡಬ್ಲ್ಯೂಆರ್‍ಟಿಸಿಗೆ 219 ಹಾಗೂ ಎನ್‍ಎಸ್‍ಆರ್‍ಟಿಗೆ 299 ಬಸ್ಸುಗಳನ್ನು ಖರೀದಿಸಲಾಗಿದೆ.

ಸಾರಿಗೆ ಇಲಾಖೆಗೆ ಎಸ್ಸಾರ್ಟಿಸಿ ಮಾತ್ರ ಸೇರಲಿದ್ದು, ಉಳಿದ ನಾಲ್ಕು ವಿಭಾಗಗಳಿಗೆ ಆಯಾ ನಿಗಮಕ್ಕೆ ವಹಿಸಲಾಗಿದೆ. ಬಸ್ ಗಳ ಖರೀದಿಸಿರುವ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹಾಗೆ 5.2 ವರ್ಷ ಅಥವಾ 8 ಲಕ್ಷ  ಕಿ.ಮೀ. ಓಡಿರುವ 3 ಸಾವಿರ ಬಸ್ಸುಗಳನ್ನು ಗುಜರಿಗೆ ಹಾಕುವ ಕೆಲಸವೂ ಪ್ರಕ್ರಿಯೆಯಲ್ಲಿದೆ ಎಂದರು.

ಆಹಾರ ಪದಾರ್ಥ ಗುಣಮಟ್ಟ: ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಎಂಆರ್‍ಪಿ ದರದಂತೆಯೇ ಮಾರಾಟ ಮಾಡದಿರುವ ಬಗ್ಗೆ ಸಾಕಷ್ಟು ದೂರು ಕೇಳಿ ಬರುತ್ತಿವೆ. ಈ ಬಗ್ಗೆ ಸದ್ಯದಲ್ಲಿಯೇ ಸಹಾಯವಾಣಿ ಆರಂಭಿಸಿ ಪ್ರಯಾಣಿಕರು ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

ಇದಕ್ಕಾಗಿ ಅಧಿಕಾರಿಗಳನ್ನು ನೇಮಿಸಿ ಮಾರಾಟ ಮಳಿಗೆಗಳು ಸಾರ್ವಜನಿಕರಿಗೆ ಅನ್ಯಾಯ ಮಾಡದಂತೆ ಎಚ್ಚರ ವಹಿಸಲು ನಿಗಾ ಇಡಲಾಗುವುದು. ಆಯಾ ಸ್ಥಳದಲ್ಲಿ ನಾಮಫಲಕ ಅಳವಡಿಸಿ ಸಾರ್ವಜನಿಕರಿಗೂ ಅರಿವು ಮೂಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ಪದ್ಧತಿಯನ್ನು ಅವಲೋಕಿಸಲಾಗುತ್ತಿದ್ದು, ಅಲ್ಲಿ ಯಶಸ್ವಿಯಾದರೆ ರಾಜ್ಯದಲ್ಲೂ ಜಾರಿಗೆ ತರಲಾಗುವುದು. ಇದರ ನಿರ್ವಹಣಾ ಜವಾಬ್ದಾರಿ ಗೃಹ ಇಲಾಖೆಗೆ ಬರುವುದರಿಂದ ತಾವು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT