ಕಾರ್ಯಕ್ರಮದಲ್ಲಿ ಮeಜಿ ಸಚಿವರಾದ ಅನಿಲ್ ಶಾಸ್ತ್ರಿ, ರಾಜಶೇಖರನ್, ಗಾಂಧಿ ಸ್ಮರಣ ನಿಧಿ ಅಧ್ಯಕ್ಷ ಶ್ರೀನಿವಾಸಯ್ಯ ಇದ್ದರು 
ಜಿಲ್ಲಾ ಸುದ್ದಿ

ಇನ್ನೆಷ್ಟು ದಿನ ಬ್ರಿಟಿಷ್ ಕಾನೂನು?

ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಇನ್ನೂ ಬ್ರಿಟಿಷ್ ಸರ್ಕಾರ ಬಿಟ್ಟು ಹೋದ ಕಾನೂನುಗಳನ್ನೇ ಅನುಸರಿಸುತ್ತಿದ್ದೇವೆ. ಇದನ್ನು ಮಾರ್ಪಾಡು ಮಾಡುವ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಅಭಿಪ್ರಾಯಪಟ್ಟರು...

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಇನ್ನೂ ಬ್ರಿಟಿಷ್ ಸರ್ಕಾರ ಬಿಟ್ಟು ಹೋದ ಕಾನೂನುಗಳನ್ನೇ ಅನುಸರಿಸುತ್ತಿದ್ದೇವೆ. ಇದನ್ನು ಮಾರ್ಪಾಡು ಮಾಡುವ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಶಾಸ್ತ್ರಿ ಅಭಿಪ್ರಾಯಪಟ್ಟರು.

ಎಂವಿಆರ್ ಫೌಂಡೇಷನ್, ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಮೆಮೋರಿ ಯಲ್ ಟ್ರಸ್ಟ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ರಾಜಕೀಯ ಮೌಲ್ಯ ಮತ್ತು ಸಿದ್ಧಾಂತಗಳ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇನ್ನೂ ಎಷ್ಟು ದಿನಗಳು ಬ್ರಿಟಿಷರ ಕಾನೂನುಗಳನ್ನು ಪಾಲನೆ ಮಾಡುವುದು? ನಮ್ಮದು ಎಂಬ ಕಾನೂನುಗಳು ರಚನೆ ಆಗಬೇಕು. ಇದರ ಬಗ್ಗೆ ದೇಶದ ಯುವಜನತೆ ಚಿಂತಿಸಬೇಕಿದೆ.

ಭಾರತ ವಿಶ್ವದಲ್ಲೇ ವಿಭಿನ್ನವಾದ ದೇಶ. ಇಲ್ಲಿ ಬಹಳಷ್ಟು ಅವಕಾಶಗಳಿವೆ. ಇಂದಿನ ಯುವಕರು ಬೇರೆ ದೇಶಗಳಿಗೆ ಹೋಗಿ ಸಾಧನೆ ಮಾಡುತ್ತಾರೆ. ಅದನ್ನು ಇಲ್ಲಿಯೇ ಮಾಡಿದರೆ ದೇಶಕ್ಕೂ, ಅವರಿಗೂ ಕೀರ್ತಿ ಬರುತ್ತದೆ ಎಂದು ತಿಳಿಸಿದರು. ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿದೆ. ಹೀಗಾಗಿ ಯುವಕರು ವಿಭಿನ್ನ ರೀತಿಯಲ್ಲಿ ಚಿಂತನೆ ನಡೆಸಬೇಕು. ಯಾವುದೇ ಕೆಲಸವನ್ನಾದರೂ ಪ್ರಾಯೋಗಿ-ಕವಾಗಿ ಅಭ್ಯಾಸ ಮಾಡುವುದನ್ನು ಕಲಿತುಕೊಳ್ಳಿ. ಇದನ್ನೇ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ವಿಶ್ವೇಶ್ವರಯ್ಯ ಅವರು ಮಾಡಿದ್ದು ಎಂದು ಸಲಹೆ ನೀಡಿದರು.

ಈ ಹಿಂದೆಯೂ ರಾಜಕೀಯ ಬದಲಾವಣೆಗಳೂ ಇದ್ದವು. ಆದರೆ, ಇಂದಿನಷ್ಟು ಬದಲಾವಣೆ ಇರಲಿಲ್ಲ. ಇಂದಿನ ರಾಜಕೀಯ ಅಧಿಕಾರಕ್ಕಾಗಿ ನಡೆಯುತ್ತಿದೆ. ಇದು ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಆವರಿಸಿದೆ ಎಂದು ವಿಷಾದಿಸಿದರು.

ಬಾಲ್ಯದ ನೆನಪು: ಪ್ರಧಾನಿ ಅವರ ಮಗ ಎಂದು ಯಾವುದೇ ಪರೀಕ್ಷೆಗಳಿಲ್ಲದೇ ನಾನು 16ನೇ ವಯಸ್ಸಿನಲ್ಲೇ ಚಾಲನಾ ಪರವಾನಗಿ ಪಡೆದಿದ್ದೆ. ಆದರೆ, ಇದು ನಮ್ಮ ತಂದೆ ಅವರಿಗೆ ಇಷ್ಟವಿರಲಿಲ್ಲ. ಪ್ರಧಾನಿಯಾಗಿದ್ದ ನಮ್ಮ ತಂದೆ ಇದನ್ನು ತೀವ್ರವಾಗಿ ವಿರೋಧಿಸಿದ್ದರು.

ಪ್ರಧಾನಿ ಮನೆಯಲ್ಲೇ ಕಾನೂನು ಉಲ್ಲಂಘನೆಯಾದರೇ ಹೇಗೆ? ಪರವಾನಗಿ ವಾಪಸ್ ಮಾಡುವಂತೆ ಹೇಳಿ-ದ್ದರು ಎಂದು ತಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಿದ್ಧಾಂತಗಳನ್ನು ನೆನಪಿಸಿದರು. ಕೇಂದ್ರದ ಮಾಜಿ ಸಚಿವ ಹಾಗೂ ಎಂವಿಆರ್ ಫೌಂಡೇಷನ್ ಅಧ್ಯಕ್ಷ ಎಂ.ವಿ. ರಾಜಶೇಖರನ್, ಶಾಸ್ತ್ರಿ ಅವರ ಅವಧಿಯಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ರಚಿಸಿ ಇಡೀ ದೇಶದ ಗ್ರಾಮೀಣ ಜನರಿಗೆ ಸ್ವಯಂ ಉದ್ಯೋಗ ನೀಡಿದರು ಎಂದರು. ಕಾರ್ಯಕ್ರಮದಲ್ಲಿ ಗಾಂಧಿ ಸ್ಮರಣ ನಿಧಿ ಅಧ್ಯಕ್ಷ ಡಾ.ಎಚ್.ಶ್ರೀನಿವಾಸಯ್ಯ, ಎಂವಿಆರ್ ಫೌಂಡೇಷನ್ ಉಪಾಧ್ಯಕ್ಷ ಎಚ್. ಹನುಮಂತಪ್ಪ, ಗಾಂಧಿವಾದಿ ಎಸ್.ಎನ್. ಸುಬ್ಬರಾವ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT