ಬೆಂಗಳೂರು: ಹೆಚ್ಚು ಹಣ ಗಳಿಸುವ ಆಸೆಯೇ ಈತನನ್ನು ಜೈಲಿಗೆ ಅಟ್ಟುವಂತೆ ಮಾಡಿದೆ. ಹಣ ಗಳಿಸುವ ಮಾರ್ಗಕ್ಕೆ ಈತ ಬಳಸಿಕೊಂಡಿದ್ದು ಸಿಬಿಐ ಅಧಿಕಾರಿಯ ನಟನೆಯನ್ನು!
ನಗರದ ರಿಚ್ಮಂಡ್ ವೃತ್ತದ ಜಾನ್ಸನ್ ಮಾರುಕಟ್ಟೆ ನಿವಾಸಿ ಸೈಯದ್ ಮೊಹಮ್ಮದ್ ಅಬ್ಬಾಸ್ (21) ಬಂಧಿತನಾಗಿರುವ ನಕಲಿ ಸಿಬಿಐ ಅಧಿಕಾರಿ. ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಈತ ಏಕಾಏಕಿ ಲಕ್ಷಾಧಿಪತಿಯಾಗಲು ಹೋಗಿ ಕೇವಲ ಮೂರೇ ದಿನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸಿಬಿಐ ಪೊಲೀಸ್ ಅಧಿಕಾರಿ ಶಿವಣ್ಣ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿರುವ ಅಶೋಕನಗರ ಪೊಲೀಸರು ವಿಚಾರಣೆ ನಡೆಸಿ ಈತನನ್ನು ಜೈಲಿಗಟ್ಟಿದ್ದಾರೆ.
ಏನು ಮಾಡುತ್ತಿದ್ದ?: `ಹಲೋ, ನಾನು ಸಿಬಿಐ ವಿಶೇಷ ದಳದ ನಿರ್ದೇಶಕ ರೂಪಕುಮಾರ್ ದತ್ತ ಮಾತಾಡ್ತಿದ್ದೀನಿ. ನೀವು ನಡೆಸಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕಡತಗಳು ಈಗ ನನ್ನ ಬಳಿ ಇವೆ.
ಮೂರೇ ದಿನಕ್ಕೆ ಸಿಕ್ಕಿಬಿದ್ದ ಎಂಜಿನಿಯರ್‍ಗಳ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿದ್ದ ಬಳಿಕ ಮೊಬೈಲ್‍ನಲ್ಲಿ ಕಾರ್ಯಾಚರಣೆಗೆ ಮುಂದಾದ ಆರೋಪಿಯು ಮೊದಲು ಮಹಾರಾಷ್ಟ್ರ ಮತ್ತು
ರಾಯ್ ಪುರದ ಇಬ್ಬರು ಎಂಜಿನಿಯರ್‍ಗಳಿಗೆ ಕರೆ ಮಾಡಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಇದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಉತ್ತರ ಪ್ರದೇಶದ ಎಂಜಿನಿಯರ್‍ಗೆ ಕರೆ ಮಾಡಿ ರೂಪಕುಮಾರ್ ದತ್ತಾ ಎಂದು ಪರಿಚಯಿಸಿಕೊಂಡಿದ್ದ. ಈ ಬಗ್ಗೆ ಅನುಮಾನಗೊಂಡ ಎಂಜಿನಿಯರ್ ನಗರದ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆರೋಪಿ ಮೊಬೈಲ್ ಆಧರಿಸಿ ವಿಳಾಸ ಪತ್ತೆ ಮಾಡಿದ್ದ ಸಿಬಿಐ ಅಧಿಕಾರಿಗಳು ಈ ಬಗ್ಗೆ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರಿಂದ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು ಮೂರೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಹಣ ಸುಲಿಗೆ ಮಾಡಲು ಎಂಜಿನಿಯರ್‍ಗಳಿಗೆ ಮೊಬೈಲ್‍ನಲ್ಲಿ ಬೆದರಿಕೆ ಹಾಕಿರುವ ಧ್ವನಿಯನ್ನು ಸಂಗ್ರಹಿಸಿರುವ ಪೊಲೀಸರು, ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸದ್ಯದಲ್ಲೇ ನಿಮ್ಮ ಮೇಲೆ ದಾಳಿ ನಡೆಸಲಿದ್ದೇನೆ. ಹಣ ಕೊಟ್ಟರೆ ದಾಳಿ ನಡೆಸುವುದಿಲ್ಲ' ಎಂದು ಹೊರರಾಜ್ಯಗಳ ಕೇಂದ್ರೀಯ ಪಿಡಬ್ಲ್ಯೂಡಿ ಇಲಾಖೆ ಎಂಜಿನಿಯರ್‍ಗಳಿಗೆ ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ.
ಆರೋಪಿಯು ಅವೆನ್ಯೂ ರಸ್ತೆಯಲ್ಲಿರುವ ತಂದೆಯ ಚಿಕ್ಕ ಆಭರಣದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಕಾಲ ಕಳೆಯುತ್ತಿದ್ದ. ಈ ನಡುವೆ ಹೇಗಾದರೂ ಮಾಡಿ ಹೆಚ್ಚು ಹಣ ಸಂಪಾದಿಸುವ ಆಲೋಚನೆಯಲ್ಲಿದ್ದ. ಅಕ್ರಮ ಮಾರ್ಗದಿಂದ ಮಾತ್ರ ಹೆಚ್ಚು ಹಣ ಸಂಪಾದಿಸಲು ಸಾಧ್ಯ ಎಂಬ ತೀರ್ಮಾನಕ್ಕೂ ಬಂದಿದ್ದ. ದಿನದ ಬಹುತೇಕ ಸಮಯ ಮೊಬೈಲ್‍ನೊಂದಿಗೆ ಕಳೆಯುತ್ತಿದ್ದ. ಅದರಲ್ಲಿ ಪೊಲೀಸರು, ಸಿಬಿಐ ಅಧಿಕಾರಿಗಳು ಭ್ರಷ್ಟರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಹಣ, ಚಿನ್ನಾಭರಣ ವಶಪಡಿಸಿಕೊಳ್ಳುವ ವಿಡಿಯೋಗಳನ್ನು ಯೂಟ್ಯೂಬ್‍ನಲ್ಲಿ
ಆಸಕ್ತಿಯಿಂದ ನೋಡುತ್ತಿದ್ದ.
ಇಂತಹ ವಿಡಿಯೋಗಳನ್ನು ಹೆಚ್ಚು ವೀಕ್ಷಣೆ ಮಾಡಿ ಪ್ರೇರಿತನಾದ ಆರೋಪಿಯು ಸಿಬಿಐ ಅಧಿಕಾರಿ ಸೋಗಿನಲ್ಲಿ ಅಧಿಕಾರಿಗಳನ್ನು ಹೆದರಿಸಿ ಹಣ ಸುಲಿಯಲು ನಿರ್ಧರಿಸಿದ. ತಲೆಗೆ ಹಣದ ಹುಚ್ಚು ಏರುತ್ತಿದ್ದಂತೆ ಸಿಬಿಐ ಅಧಿಕಾರಿಗಳ ಬಗ್ಗೆ ತಿಳಿಯಲು ಮುಂದಾದ ಆರೋಪಿ ಅಬ್ಬಾಸ್, ರಾತ್ರಿ ವೇಳೆ ಮೊಬೈಲ್ ಹಿಡಿದು ಮನೆ ಮಹಡಿ ಏರಿ ಸಿಬಿಐ ವೆಬ್‍ಸೈಟ್ ಜಾಲಾಡುತ್ತಿದ್ದ. ಹೀಗೆ ಸುಮಾರು 10 ದಿನಗಳ ಕಾಲ ವೆಬ್‍ಸೈಟ್ ಜಾಲಾಡಿದ ಆರೋಪಿಯು ಕೊನೆಗೆ ಸಿಬಿಐ ವಿಶೇಷ ದಳದ ನಿರ್ದೇಶಕ ರೂಪಕುಮಾರ್ ದತ್ತ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ಅಂತೆಯೇ ಹೊರರಾಜ್ಯಗಳ ಕೇಂದ್ರೀಯ ಪಿಡಬ್ಲ್ಯೂಡಿ ಎಂಜಿನಿಯರ್‍ಗಳ ಮಾಹಿತಿ, ದೂರವಾಣಿ ಸಂಖ್ಯೆಯನ್ನೂ ಕಲೆಹಾಕಿದ್ದ ಎಂದು ಪೊಲೀಸರು ತಿಳಿಸಿದರು.