ಜಿಲ್ಲಾ ಸುದ್ದಿ

ಬೃಹತ್ ರಾಷ್ಟ್ರ ಧ್ವಜ ನಿರ್ಮಿಸಲಿರುವ ವಂದೇ ಮಾತರಂ ಟ್ರಸ್ಟ್

Srinivas Rao BV

ಬೆಂಗಳೂರು: ರಾಷ್ಟ್ರೀಯ ಐಕ್ಯತೆ ಪ್ರೇರೇಪಿಸಲು ಬೃಹತ್ ರಾಷ್ಟ್ರ ಧ್ವಜ ನಿರ್ಮಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಜಿಎ ಬಾವ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ಯುನೇಷಿಯಾ ರಾಷ್ಟ್ರ ಧ್ವಜ ನಿರ್ಮಿಸಿದ ಮೊದಲ ದೇಶ. 30 ವರ್ಷಗಳಿಂದ ವಿವಿಧ ರಾಷ್ಟ್ರಗಳು ರಾಷ್ಟ್ರ ಧ್ವಜ ನಿರ್ಮಿಸಿ ವಿಶ್ವ ದಾಖಲೆ ಮಾಡಿವೆ. ಈ ನಿಟ್ಟಿನಲ್ಲಿ 3000 ಮೀಟರ್ ಬಟ್ಟೆ ಬಳಸಿ 33750 ಚದರ ಅಡಿಯ(150 ಅಡಿ ಉದ್ದ 225 ಅಡಿ ಅಗಲ) ರಾಷ್ಟ್ರ ಧ್ವಜವನ್ನು ಕೇವಲ 24 ಗಂಟೆಯಲ್ಲಿ ನಿರ್ಮಿಸಲಾಗುವುದು. ಇದರೊಂದಿಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ನೂತನ ದಾಖಲೆ ಸ್ಥಾಪಿಸಲು ಮುಂದಾಗಿದ್ದೇವೆ. ಇದು ಇತಿಹಾಸದಲ್ಲೇ ಮೊದಲ ಪ್ರಯತ್ನ ಎಂದರು.  

ಜ.26 ರ ಸಂಜೆ 4 :30 ರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಭಾಗವಹಿಸುವಿಕೆಗೂ ಅವಕಾಶವಿದೆ. ಧ್ವಜ ನಿರ್ಮಾಣದ ನಂತರ ಇಸ್ರೋ, ಹೆಚ್ಎಎಲ್ ತೇಜಸ್, ಭೂ ಸೇನೆ, ವಾಯು ಸೇನೆ ಮತ್ತು ನೌಕಾ ದಳಕ್ಕೆ ಗೌರವ ಸಲ್ಲಿಸಲು ಆಯಾ ಇಲಾಖೆಗಳ ಸಹಕಾರದೊಂದಿಗೆ ರಾಷ್ಟ್ರಧ್ವಜ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ.

SCROLL FOR NEXT