ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಜೆಡಿಎಸ್‌ಗೆ ಜನರೇ ಪಾಠ ಕಲಿಸಲಿದ್ದಾರೆ'

Rashmi Kasaragodu
Updated On : 2 Apr 2013, 1:34 am

ಕ.ಪ್ರ. ವಾರ್ತೆ    ಕನಕಪುರ   ಏ.1
ಮುಖ್ಯಮಂತ್ರಿ, ಶಾಸಕ, ಸಂಸದರಾಗಿದ್ದರೂ ಹಾರೋಹಳ್ಳಿ, ಮರಳವಾಡಿ ಹೋಬಳಿಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ಜೆಡಿಎಸ್ ಮುಖಂಡರಿಗೆ ಪ್ರಸಕ್ತ ಚುನಾವಣೆಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ. ಇಂದಿಗೂ ಮೂಲಭೂತ ಸೌಕರ್ಯಗಳನ್ನು ಕಾಣದ ಕೊಂಪೆಯಾಗಿರುವ ಬಹುತೇಕ ಹಳ್ಳಿಗಳ ಜನರ ಶಾಪ ಇವರಿಗೆ ತಟ್ಟದೇ ಬಿಡುವುದಿಲ್ಲ ಎಂದು ರಾಮನಗರ ವಿಧಾನಸಭಾ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿ ಮರಿದೇವರು ಹೇಳಿದ್ದಾರೆ.
ಅವರು ಕನಕಪುರ ತಾಲೂಕಿನ ತಟ್ಟೆಕೆರೆಯಲ್ಲಿ ಪಾದಯಾತ್ರೆ ಮೂಲಕ  ಮನೆಮನೆಗಳಿಗೆ ತೆರಳಿ ಮತಯಾಚನೆ ನಡೆಸುತ್ತಾ ಮಾತನಾಡಿದರು. ತೀವ್ರವಾದ ಕುಡಿಯುವ ನೀರಿನ ಬರವನ್ನು ಎದುರಿಸುತ್ತಿರುವ ಈ ಪ್ರದೇಶಗಳಲ್ಲಿ ಜನರು ಕಾಂಗ್ರೆಸ್ ಮುಖಂಡ ಮರಿದೇವರು ವಾಹನಕ್ಕೆ ಅಡ್ಡಲಾಗಿ ಖಾಲಿ ಬಿಂದಿಗೆಗಳನ್ನು ಇರಿಸಿ ತಡೆಯೊಡ್ಡಿ ಪ್ರತಿಭಟಿಸಿದರು.   ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಝಳವನ್ನು ಲೆಕ್ಕಿಸದೆ ಹಳ್ಳಿಹಳ್ಳಿಗಳಲ್ಲಿ ತೀವ್ರವಾದ ಪ್ರಚಾರ ನಡೆಸುತ್ತಿರುವ ಮರಿದೇವರು, ಕ್ಷೇತ್ರದ ಸಾವಿರಾರು ಕುಟುಂಬಗಳ ಪಡಿತರ ಚೀಟಿಗಳು ರದ್ದಾಗಿವೆ. ನೂತನ ಪಡಿತರಚೀಟಿ ಲಭಿಸುತ್ತಿಲ್ಲ. ಸರ್ಕಾರದ ಸವಲತ್ತುಗಳು ಜನರ ಪಾಲಿಗೆ ಗಗನ ಕುಸುಮವಾಗಿದೆ. ಶಾಸಕ ಕೆ.ರಾಜು ಕೂಡಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ದಿವ್ಯ ನಿರ್ಲಕ್ಷ್ಯ ಧೋರಣೆ ಹೊಂದಿರುವುದರಿಂದ ಜನರು ಪರಿತಾಪ ಪಡುವಂತಾಗಿದೆ ಎಂದರು.
 ಕನಕಪುರ ತಾಲೂಕನ್ನು ಎರಡೂವರೆ ದಶಕಗಳ ಕಾಲ ಜೆಡಿಎಸ್ ಮುಖಂಡರು ನಿರಂತರವಾಗಿ ಚುನಾಯಿತರಾಗಿ ಅಧಿಕಾರ ಅನುಭವಿಸಿ ಅಭಿವೃದ್ಧಿಯನ್ನು ಮೂಲೆಗೆ ತಳ್ಳಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿಶ್ಚಿತವಾಗಿ ಶಾಶ್ವತ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಭರವಸೆಯನ್ನು ಮರಿದೇವರು ನೀಡಿದರು. ಈ ಕ್ಷೇತ್ರದ ಸಂದದರಾಗಿದ್ದರೂ ಕುಮಾರಸ್ವಾಮಿ ಯವರು ಕನಕಪುರ ತಾಲೂಕಿನ ಅಭಿವೃದ್ಧಿಗೆ ಚಿಕ್ಕಾಸೂ ನೀಡದಿರುವುದು ವಿಪರ್ಯಾಸ, ರಾಜ್ಯರಾಜಕಾರಣದ ಬಗ್ಗೆ ಮಾತನಾಡುವ ಇವರಿಗೆ ತಾಲೂಕಿನ ದುಸ್ಥಿತಿ ಗೋಚರಿಸುವುದಿಲ್ಲವೇ ಎಂದು ಟೀಕಿಸಿದರು.  
ಮುಖಂಡರಾದ ಜಗದೀಶಗೌಡ, ಚಿಕ್ಕಯ್ಯ, ಚೇತನ್‌ಕುಮಾರ್, ಕೃಷ್ಣಪ್ಪ, ಮುದ್ದೇಗೌಡ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement