ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದಿಗ್ಗಜರ ಕಾದಾಟದಲ್ಲಿ ಹೊಸ ಕೋಟೆ ಕಟ್ಟೋರ್ಯಾರು?

Rashmi Kasaragodu
Updated On : 2 Apr 2013, 1:35 am

ಕ.ಪ್ರ.ವಾರ್ತ್ಣೆ ಸೂಲಿಬೆಲೆ   ಏ.1
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವ ಬಿ.ಎನ್. ಬಚ್ಚೇಗೌಡ ಬಿಜೆಪಿ ಪಕ್ಷದಿಂದಲೇ ಸ್ವರ್ಧೆಗೆ ಇಳಿದಿದ್ದು, ಕಾಂಗ್ರೆಸ್ ಪಕ್ಷದಿಂದ ಎನ್.ನಾಗರಾ ಸ್ಪರ್ಧೆ ಖಚಿತವಾಗುತ್ತಿದೆ. ಈ ಇಬ್ಬರ  ನಡುವೆ ನೇರ ಪೈಪೋಟಿ ನಡೆಯಲಿದ್ದು, ಈ ದಿಗ್ಗಜರಲ್ಲಿ ಯಾರು ವಿಜಯಮಾಲೆ ಧರಿಸಿ ಹೊಸಕೋಟೆಗೆ ನಾಯಕರಾಗುತ್ತಾರೆಂಬುದು ಕುತೂಹಲ ಮೂಡಿಸಿದೆ.
ಬಚ್ಚೇಗೌಡರ ಬೇರೆ ಪಕ್ಷದಿಂದ ಸ್ವರ್ಧಿಸುತ್ತಾರೆಂಬ ಕುತೂಹಲಕ್ಕೆ ಚಿಕ್ಕೊಂಡಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಪೂರ್ವ ಭಾವಿ ಸಭೆಯಲ್ಲಿ ತೆರೆ ಎಳೆದಿರುವ ಸಚಿವರು ಬಿಜೆಪಿಯಿಂದ ಅಖಾಡಕ್ಕೆ ಧುಮುಕ್ಕಿದ್ದು ಏ.15ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ತನ್ನದೇಯಾದ ಛಾಪು ಹೊಂದಿರುವ ಬಚ್ಚೇಗೌಡರು ಬಿಜೆಪಿ ಸರ್ಕಾರದಲ್ಲಿ ನಡೆದ ಕೆಲವೊಂದು ಮುಜಗರ ಘಟನೆಗಳಿಂದ ವಿಚಲಿತರಾಗಿಲ್ಲ. ಚನ್ನಬೈರೇಗೌಡರಿಂದ ಸಭ್ಯ ರಾಜಕಾರಣ ಮಾಡಿಕೊಂಡು ಬಂದಿದ್ದು, ತಾನೂ ಬಿಜೆಪಿ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅಪಾರ ಪ್ರಮಾಣದ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ. ಮತದಾರರ ನನ್ನ ಕೈಬಿಡುವದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರೆ , ರಾಜ್ಯ ಮಟ್ಟದಲ್ಲಿ  ಬಿಜೆಪಿ ಸರ್ಕಾರದ ಕಹಿ ಘಟನೆಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗಿರುವ ಕಾಂಗ್ರೆಸ್ ಎನ್.ನಾಗರಾಜ್ ಮತದಾರರ ಕೈಹಿಡಿಯುತ್ತಾನೆ ಎಂಬ ಆಶಾಭಾವನೆ ಹೊಂದಿದ್ದಾರೆ.
1999ರಲ್ಲಿ ಹೊಸಕೋಟೆಯಿಂದ ರಾಜಕೀಯ ಅಖಾಡಕ್ಕೆ ಇಳಿದ ನಾಗರಾಜ್ ಒಮ್ಮೆ ಗೆದ್ದು, ಮತ್ತೆ ಸೋತಿದ್ದಾರೆ. ಆದರೇ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಬಚ್ಚೇಗೌಡರು, 1978ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. 1985 ಪುನರಾಯ್ಕೆ,1994ರಲ್ಲಿ ಪ್ರಚಂಡ ಜಯಭೇರಿ, ಮತ್ತೆ  2008ರಲ್ಲಿ ಗೆದ್ದು ರಾಜ್ಯ ರಾಜಕಾರಣದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 5 ಹೋಬಳಿಗಳಲ್ಲಿರುವ ಮತದಾರರ ನಾಡಿ ಮಿಡಿತವನ್ನು ಅರಿತಿರುವ ಬಚ್ಚೇಗೌಡರು ಈ ಬಾರಿಯೂ ಕ್ಷೇತ್ರವನ್ನು ಹಿಡಿದಿಟ್ಟುಕೊಳ್ಳಲು ಶತಾಯಗತಾಯ ಹೋರಾಟಕ್ಕೆ ಇಳಿದಿದ್ದಾರೆ.
 ಕ್ಷೇತ್ರದಲ್ಲಿ ಮುಸ್ಲಿಮರು, ಎಸ್ಸಿ, ಎಸ್ಟಿ ಹಾಗೂ ಒಕ್ಕಲಿಗರ ಒಲವು ನಿರ್ಣಾಯಕವಾಗಲಿದ್ದು ಸದ್ಯ 1,76,311 ಮತದಾರರಿದ್ದಾರೆ. ಇದರಲ್ಲಿ 90,385 ಪುರುಷರು, 85,926 ಮಹಿಳೆರಿದ್ದು, ಹೊಸಕೋಟೆಗೆ ಹೊಸ ನಾಯಕರ್ಯಾರು ಎಂದು ನಿರ್ಧರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement