ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವಿಧೆಡೆ ಹದವಾದ ಮಳೆ: ರೈತರಿಗೆ ಸಹಕಾರಿ

Rashmi Kasaragodu
Updated On : 2 Apr 2013, 1:35 am

ರಾಮನಗರ: ಮಾರ್ಚ್ ಮಾಸಾಂತ್ಯದಲ್ಲಿ ಜಿಲ್ಲೆಯ ವಿವಿಧೆಡೆ ಹದವಾದ ಮಳೆ ಬಿದ್ದಿರುವುದು ರೈತರಿಗೆ ಸಹಕಾರಿಯಾಗಿದೆ. ರೈತರು ಉಳುಮೆ ಮಾಡಿ, ಖುಷ್ಕಿ ಧಾನ್ಯ ಬೆಳೆಗಳಾದ ಶಕ್ತಿ ಮಾನ್ ಜೋಳ, ಮುಸುಕಿನ ಜೋಳ, ದ್ವಿದಳ ಧಾನ್ಯ ಬೆಳೆಗಳಾದ ಉದ್ದು, ಹೆಸರು, ಅಲಸಂದೆ, ತೊಗರಿ ಹಾಗೂ ಎಣ್ಣೆ ಕಾಳು ಬೆಳಗಳಾದ ಎಳ್ಳು ಬಿತ್ತನೆ ಕೈಗೊಳ್ಳಲು ಸೂಕ್ತ ಕಾಲವಾಗಿದೆ. ಇಳಿಜಾರಿಗೆ ಅಡ್ಡಲಾಗಿ ಸಾಲಿನಲ್ಲಿ ಬಿತ್ತನೆ ಮಾಡುವಂತೆ ಜಂಟಿ  ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ತಾಂತ್ರಿಕವಾಗಿ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement