ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ವೋಟಿಂಗ್ ಕಡ್ಡಾಯ' (ಸುದ್ದಿ ಸಂಕ್ಷೇಪ )

Rashmi Kasaragodu
Updated On : 2 Apr 2013, 1:35 am

ಮಾಗಡಿ:  ಮತದಾನ ಪವಿತ್ರವಾದುದು, ಚುನಾವಣೆ ವೇಳೆ ತಪ್ಪದೆ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ತಹಸೀಲ್ದಾರ್  ಡಾ. ಹರೀಶ್ ನಾಯಕ್ ನುಡಿದರು.   ಅವರು ಮಾಗಡಿ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ  ಚುನಾವಣಾ ಆಯೋಗ ಜಿಲ್ಲಾ ಮತ್ತು ತಾಲೂಕು ವತಿಯಿಂದ ಮತದಾರರ ಜಾಗೃತಿ ಮತ್ತು ವ್ಯವಸ್ಥೆಯಲ್ಲಿ ಶಿಕ್ಷಣ ಹಾಗೂ ಸಹಭಾಗಿತ್ವದ ಅರಿವು  ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಸೈಕಲ್ ಜಾತಾ ಮತ್ತು ಪಿಡಿಓಗಳ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಾ  ಮತದಾರರು ತಪ್ಪದೆ ಮತದಾನ ಮಾಡಬೇಕು ಎಂದು ಮತದಾನದ ಪಾವಿತ್ರ್ಯತೆಯ ಕುರಿತು ಸುದೀರ್ಘವಾಗಿ ತಿಳಿಸಿಕೊಟ್ಟರು.   ನಂತರ ಕಲ್ಯಗೇಟ್ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಲಾಗಿತ್ತು. ನಂತರ ಪಟ್ಟಣದಪ್ರಮುಖ ಬೀದಿಯಲ್ಲಿ  ಜನಜಾಗೃತಿ ಮೂಡಿಸು  ಜಾಥಾ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.   ಬಿಇಓ ರಂಗಸ್ವಾಮಿ, ತಾ.ಪಂ. ಇಓ ಕೆ.ಬಿ. ಅಕ್ಕೋಜಿ, ಚುನಾವಣಾ ಶಿರಸ್ತೇದಾರ್  ಎನ್.ಶಿವಕುಮಾರ್, ತಾಲೂಕು ಕಚೇರಿಯ ರೆವಿನ್ಯೂ ಅಧಿಕಾರಿಗಳಾದ ಗುರುಲಿಂಗಪ್ಪ, ಮಹಾದೇವಯ್ಯ, ಮಹಾಲಿಂಗಪ್ಪ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್, ಜಯರಾಮು, ಕೃಷಿ ಸಹಾಯಕ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಆರ್. ಮಂಜನಾಥ್, ಆರ್.ಓ. ಗುರುನಾಥ್, ನಂದೀಶ್, ನಾಗಯ್ಯ ಇತರರು ಇದ್ದರು.
ಮಗು ಸಾವು: ದೂರು
ಕನಕಪುರ: ಖಾಸಗಿ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಪೊಲೀಸರಿಗೆ ದೂರು ನೀಡಿರುವ ಘಟನೆ ಕನಕಪುರದಲ್ಲಿ ಸೋಮವಾರ ಸಂಭವಿಸಿದೆ. ಪಟ್ಟಣದ ಮೇಗಳ ಬೀದಿಯ ನಾಗೇಶ್ ಎಂಬುವರ ಪುತ್ರಿ ಹರಿಪ್ರಿಯ ಸಾವನ್ನಪ್ಪಿದ ಬಾಲಕಿ. ಅನಾರೋಗ್ಯಪೀಡಿತ ಬಾಲಕಿಯನ್ನು ಭಾನುವಾರ ಚಿಕಿತ್ಸೆಗಾಗಿ ಪಟ್ಟಣದ ರಾಮನಗರ ರಸ್ತೆಯಲ್ಲಿರುವ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಬಾಲಕಿಗೆ ಚುಚ್ಚುಮದ್ದು ನೀಡಿದ್ದರು. ಸೋಮವಾರ ಬಾಲಕಿ ಕೊನೆಯುಸಿರೆಳೆದಳು. ಇದರಿಂದ ರೊಚ್ಚಿಗೆದ್ದ ಮೃತಳ ಪೋಷಕರು ಮತ್ತು ಸಂಬಂಧಿಕರು ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿ, ಬಾಲಕಿಯ ಸಾವಿಗೆ ವೈದ್ಯರ ನಿರ್ವಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಕನಕಪುರ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಳೆ ಎನ್ನೆನ್ನೆಸ್ ಶಿಬಿರ
ದೊಡ್ಡಬಳ್ಳಾಪುರ: ತಾಲೂಕಿನ ಕೋಲಿಗೆರೆಯ ಸತೀಶ್ಚಂದ್ರ ಶಿಕ್ಷಕರ ತರಬೇತಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಚಿಕ್ಕಬೆಳವಂಗಲ ಗ್ರಾಮದಲ್ಲಿ 7 ದಿನಗಳ ವಿಶೇಷ ವಾರ್ಷಿಕ ಸೇವಾ ಶಿಬಿರ ನಡೆಯಲಿದೆ.ಏ.3ರಂದು ಬುಧವಾರ ಬೆಳಗ್ಗೆ 11.30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದ್ದು, ಬೆಂ.ಗ್ರಾ.ಜಿಲ್ಲಾ ಡಯಟ್‌ನ ಪ್ರಾಂಶುಪಾಲ ಮಾದೇಗೌಡ ಉದ್ಘಾಟಿಸುವರು. ಸಂಸ್ಥೆಯ ಕಾರ್ಯದರ್ಶಿ ಆಂಜನೇಯಮೂರ್ತಿ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement