ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿವಸಾಯಿಬಾಬಾ ಬಂಧನಕ್ಕೆ ಗಡುವು

Rashmi Kasaragodu
Updated On : 1 Apr 2013, 11:44 am

ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಏ.1
ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ಬಯಲಿಗೆ ಬರುತ್ತಿದ್ದಂತೆಯೇ ತಾಲೂಕಿನ ಹಾರೋಬಂಡೆ ಶಿವಸಾಯಿಬಾಬಾ ನಾಪತ್ತೆಯಾಗಿದ್ದು, ಇದೀಗ ಅವರ ಆಶ್ರಮದಲ್ಲಿ ನೀರವ ಮೌನ ಆವರಿಸಿ ಎಲ್ಲ ಧಾರ್ಮಿಕ ಚಟುವಟಿಕೆಗಳೂ ಸ್ಥಗಿತಗೊಂಡಿವೆ.
ಇಷ್ಟು ದಿನ ಸುಮ್ಮನಿದ್ದು ಸ್ವಾಮೀಜಿಯಿಂದ ಕಿರುಕುಳ ಅನುಭವಿಸಿದ್ದ ಹಲವರು ಪೊಲೀಸ್ ಠಾಣೆಯ ಮೆಟ್ಟಲೇರಿ ದೂರುಗಳನ್ನು ನೀಡಲು ಮುಂದಾಗುತ್ತಿದ್ದರ ನಡುವೆ, ಸ್ವಾಮೀಜಿ ವಿರುದ್ಧ ಆಶ್ರಮದ ಟ್ರಸ್ಟಿಗಳು ಕಠಿಣ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದ್ದಾರೆ.  
ಆಂಧ್ರದ ಮೂಲ ದೇವಪ್ಪ ಅಲಿಯಾಸ್ ದೇವೇಂದ್ರ ರೆಡ್ಡಿ ಇದ್ದಿಲು, ಮೀನಿನ ವ್ಯಾಪಾರ ಮಾಡುತ್ತಿದ್ದನಂತೆ. ಆತನಿಗೆ ಇಬ್ಬರು ಪತ್ನಿಯರೂ ಇದ್ದಾರೆ ಎಂಬೆಲ್ಲ ಸುದ್ದಿಗಳು ಎಲ್ಲೆಡೆ ಹರಡುತ್ತಿವೆ. ಈಗ ಸ್ವಾಮೀಜಿ ಆಂಧ್ರದಲ್ಲಿನ ಜಿಪಂ ಅಧ್ಯಕ್ಷರೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಾಬಾರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದವರು ಗಲಿಬಿಲಿಗೊಂಡಿದ್ದು ತಮ್ಮ ವ್ಯವಹಾರ ವಹಿವಾಟಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಒಂದು ವಾರ ಗಡುವು: ಬಾಬಾರನ್ನು ವಾರದೊಳಗೆ ಬಂಧಿಸಬೇಕು. ಕೂಡಲೇ ಹಾರೋಬಂಡೆಯಲ್ಲಿನ ಆಶ್ರಮವನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕರ್ನಾಟಕ ಜನಪರ ವೇದಿಕೆ ಪೊಲೀಸ್ ಇಲಾಖೆಗೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement