ಆಟೋ ಪಲ್ಟಿ: ಇಬ್ಬರಿಗೆ ತೀವ್ರ ಗಾಯ
ಮಾಗಡಿ: ತಾಲೂಕಿನ ದೊಂಬರಪಾಳ್ಯದ ಬಳಿ ಆಟೋ ಪಲ್ಟಿ ಹೊಡೆದು ಯೋಗೇಶ್, ಚೇತನ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ವೇಗವಾಗಿ ಬಂದ ಸರ್ಕಾರಿ ಬಸ್ ಆಟೋ ಸಿಕ್ಕಿ ಹಾಕಿಕೊಳ್ಳುವ ಸನ್ನಿವೇಶವನ್ನು ಅರಿತ ಆಟೋ ಚಾಲಕ ಆಟೋವನ್ನು ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿ ಪಲ್ಟಿ ಹೊಡೆದ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡರು. ಗಾಯಾಳುಗಳ ಸ್ಥಿತಿ ಚಿಂತಜನಕವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.