ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಂಚನಬೆಲೆಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳ ಸಾವು

Rashmi Kasaragodu
Updated On : 3 Apr 2013, 1:24 am

ಮಾಗಡಿ: ಮಂಚನಬೆಲೆ ಜಲಾಶಯದಲ್ಲಿ  ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು  ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬೆಂಗಳೂರಿನ ರಾಜಾಜಿನಗರದ ಎಂ.ಇ.ಐ ಕಾಲೇಜಿನ ಒಟ್ಟು 15 ಮಂದಿ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಮಂಚನಬೆಲೆ ಜಲಾಶಯಕ್ಕೆ ತೆರಳಿದ್ದರು. ಇದರಲ್ಲಿ ರಘು (20) ಮತ್ತು ಮಹೇಶ್ (20) ಜಲಾಶಯದಲ್ಲಿ ಈಜಲು ಹೋಗಿದ್ದು, ಈಜಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಾವರೆಕೆರೆ ಪೊಲೀಸರು ಈಜುಗಾರರೊಂದಿಗೆ  ತೆರಳಿ ಜಲಾಶಯದಲ್ಲಿ ಮುಳುಗಿದ್ದ ದೇಹವನ್ನು ಹೊರತೆಗೆಯಲು ಯತ್ನಿಸಿದರು ಪತ್ತೆಯಾಗಿಲ್ಲ. ಸಂಜೆಯಾಗಿದ್ದರಿಂದ ಬುಧವಾರ ಶವ ಶೋಧ ಕಾರ್ಯಚರಣೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement