ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿದ್ಯುದಾಘಾತಕ್ಕೆ ಕಾರ್ಮಿಕ ಬಲಿ

Rashmi Kasaragodu
Updated On : 3 Apr 2013, 1:24 am

ಕ.ಪ್ರ. ವಾರ್ತೆ  ಕನಕಪುರ  ಏ.2
ಕನಕಪುರ ತಾಲೂಕು ನಿಡಗಲ್ಲು ಸಮೀಪ ಗೊಲ್ಲರದೊಡ್ಡಿಯಲ್ಲಿ ಬೆಸ್ಕಾಂನ ನೂತನ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿಯಲ್ಲಿ ತೊಡಗಿದ್ದ ಖಾಸಗೀ ಗುತ್ತಿಗೆದಾರರ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಹರಿದ ವಿದ್ಯುದಾಘಾತಕ್ಕೆ ಈಡಾಗಿ ಮೃತ ಪಟ್ಟಿರುವ ಘಟನೆ ನಡೆದಿದೆ.
ಮೃತವ್ಯಕ್ತಿಯನ್ನು ಮುತ್ತತ್ತಿ ಸಮೀಪದ ಗೊಲ್ಲಹಳ್ಳಿ ಗ್ರಾಮದ ಪ್ರಶಾಂತ (25) ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಗುತ್ತಿಗೆದಾರ ಕಲ್ಲಹಳ್ಳಿ ಕಿಟ್ಟಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮೃತ ಕಾರ್ಮಿಕರಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕನಕಪುರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ವಿದ್ಯುತ್ ಅವಘಡಗಳು ನಡೆಯುತ್ತಿದ್ದು,ಇತ್ತೀಚೆಗೆ ಬೂದಿಗುಪ್ಪೆಯಲ್ಲಿ ಹರಿದ ವಿದ್ಯುತ್‌ತಂತಿ ತಗುಲಿ ವ್ಯಕ್ತಿಯೊಬ್ಬ ಮೃತನಾಗಿದ್ದ. ಕಳೆದ ವರ್ಷವೊಂದರಲ್ಲಿಯೇ ಹತ್ತಾರು ವಿದ್ಯುತ್ ಆಘಾತದ ಸಂಬಂಧಿತ ಸಾವು ನಡೆದಿದ್ದು ಇಲಾಖೆಯ ಅಸಮರ್ಪಕ ನಿರ್ವಹಣೆ ನಿರ್ಲಕ್ಷ್ಯಗಳೇ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 ಮೃತರಿಗೆ ಪರಿಹಾರ ನೀಡುವಲ್ಲಿಯೂ ಅನಗತ್ಯ ಅಡೆತಡೆಗಳು ವಿಳಂಬಗಳು ನಡೆಯುತ್ತಿದ್ದು, ಇಲಾಖೆ ಇನ್ನಾದರೂ ಎಚ್ಚೆತ್ತು ಶೀಘ್ರವಾಗಿ ಪರಿಹಾರ ವಿತರಿಸಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement