ಹುಡುಗ ನಾಪತ್ತೆ: ಪೊಲೀಸರಿಗೆ ದೂರು
ಸೂಲಿಬೆಲೆ: ಇಲ್ಲಿಗೆ ಸಮೀಪದ ನಂದಗುಡಿ ಪೊಲೀಸ್ ಠಾಣಿ ವ್ಯಾಪ್ತಿಯ ಶಿವನಾಪುರ ಗ್ರಾಮದಲ್ಲಿನ ಚನ್ನರಾಯಪ್ಪ ಎಂಬ ಹುಡುಗ ಕೆಲಸಕ್ಕೆಂದು ಹೋದವನು ವಾಪಸ್ ಬಾರದೇ ನಾಪತ್ತೆಯಾಗಿದ್ದಾನೆ ಎಂದು ಇವರ ಅಣ್ಣ ಚಿನ್ನಪ್ಪ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಾ.28 ರಂದು ಸೋಮವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಕೆಲಸಕ್ಕೆಂದು ಮನೆಯಿಂದ ಹೊರ ಹೋದವನು ವಾಪಸ್ ಬಂದಿಲ್ಲ. ಸಂಬಂಧಿಕರ ಮನೆಯ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ, ತೆಲುಗು ಮತ್ತು ತಮಿಳು ಭಾಷೆ ಮಾತನಾಡುತ್ತಾನೆ. ನೀಲಿ ಬಣ್ಣದ ಟಿ ಶರ್ಟಿ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈತನನ್ನು ಕಂಡುವರು ನಂದಗುಡಿ ಪೊಲೀಸ್ ದೂ.ಸಂಖ್ಯೆ-080-27961250 ಸಂಪರ್ಕಿಸುವಂತೆ ಕೋರಲಾಗಿದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.