ಗುತ್ತಿಗೆ ಬಿಲ್ ವಿವಾದ: ತಾಪಂ ಕಚೇರಿಯಲ್ಲಿ ವಾಗ್ವಾದ
ದೊಡ್ಡಬಳ್ಳಾಪುರ: ಗುತ್ತಿಗೆಯೊಂದಕ್ಕೆ ಸಂಬಂಧಿಸಿದಂತೆ 6 ತಿಂಗಳಾದರೂ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಕ್ಲಾಸ್1 ಗುತ್ತಿಗೆದಾರ ಬ್ರಹ್ಮ ಎಂಬುವವರು ತಾಲೂಕು ಪಂಚಾಯಿತಿಯ ಪಂಚಾಯತ್ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಅಭಿಯಂತರ ರಾಮಕೃಷ್ಣ ಎಂಬುವವರ ಜೊತೆ ತೀವ್ರ ವಾಗ್ವಾದ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಈ ವೇಳೆ ವಾಗ್ವಾದದ ಹಂತದಲ್ಲಿ ಅಧಿಕಾರಿ ಟೇಬಲ್ ಮೇಲಿದ್ದ ಗಾಜು ಪುಡಿಪುಡಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಾಬು ಜಗಜೀವನ ರಾಂ ಜನ್ಮದಿನಾಚರಣೆ
ರಾಮನಗರ: ಜಿಲ್ಲಾಡಳಿತದಿಂದ ಡಾ.ಬಾಬು ಜಗಜೀವನ ರಾಂ ಅವರ 106 ನೇ ಜನ್ಮ ದಿನಾಚರಣೆಯನ್ನು ಏ.5ರಂದು ನಗರದಲ್ಲಿ ಏರ್ಪಡಿಸಲಾಗಿದೆ. ಅಂಬೇಡ್ಕರ್ ಭವನದಲ್ಲಿ ಅಂದು ಬೆಳಗ್ಗೆ 9.30ಕ್ಕೆ ಜಗ ಜೀವನ ರಾಂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗುವುದು. ಸಾರ್ವಜನಿಕರು, ಸಂಘ-ಸಂಸ್ಥೆಗಳು ಪಾಲ್ಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.
7ರಿಂದ ಯೋಗ ಶಿಬಿರ
ಬೆಂಗಳೂರು: ಶ್ರೀರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರ ಏ.7ರಿಂದ 14ರವರೆಗೆ ಯೋಗ ಶಿಬಿರ ನಡೆಸಲಿದೆ. ಶಿಬಿರ ಬೆಳಗ್ಗೆ 6ರಿಂದ 7ರವರೆಗೆ ನಡೆಯಲಿದ್ದು, ಆಸಕ್ತರು ಏ.6ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ- 25618300/ 9449435675.