ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಆರೋಪ
ಮಾಗಡಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಲ್ಲಲ್ಲಿ ಸರ್ಕಾರಿ ಸೌಲತ್ತುಗಳನ್ನು ವಿತರಣೆ ಮಾಡುತ್ತಿರುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಗಡಿ ಸಹೃದಯ ಬಳಗದ ಎಂ.ಕೆ.ಶಿವಲಿಂಗಯ್ಯ ಆರೋಪಿಸಿದ್ದಾರೆ. ಮಾಗಡಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯ್ತಿ ವಾಪ್ತಿಗಳಲ್ಲಿ ಬಸವ ವಸತಿ, ಇಂದಿರಾ ಅವಾಸ್, ರಾಜೀವ್ಗಾಂಧಿ ವಸತಿ ಯೋಜನೆಯ ಮನೆಗಳನ್ನು ಹಂಚಲಾಗುತ್ತಿದೆ. ಆದರೂ ಚುನಾವಣಾಧಿಕಾರಿಗಳು ಕಂಡು ಕಾಣದಂತೆ ದಿವ್ಯ ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಬಹುತೇಕ ವಿ.ಎಸ್.ಎಸ್.ಎನ್. ಬ್ಯಾಂಕ್ ಗಳಲ್ಲೂ ಸಾಲ ಸೌಲಭ್ಯಗಳನ್ನು ರೈತರುಗಳಿಗೆ ವಿತರಿಸಲಾಗುತ್ತಿದೆ ಎಂದರು.