ಪುರಸಭೆ ಸದಸ್ಯರಿಗೆ ಸೂಲಿಬೆಲೆಯಲ್ಲಿ ಸನ್ಮಾನ
ಕ.ಪ್ರ. ವಾರ್ತೆ ಸೂಲಿಬೆಲೆ ಏ.3
ಇಲ್ಲಿನ ಗ್ರಾಮಾಂತರ ಜಿಲ್ಲೆ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಖಲಂದರ್ ಖಾನ್ ಮನೆಯಲ್ಲಿ ವಿಜಯಪುರ ಪುರಸಭೆ ಚುನಾವಣಿಯಲ್ಲಿ ಇತ್ತೀಚೆಗೆ ವಿಜೇತರಾದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿಜಯಪುರದ 17ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜೇತರಾದ ಮುಬಾರಕ್ ಅವರನ್ನು ಸನ್ಮಾನಿ ಮಾತನಾಡಿದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಖಲಂದರ್ ಖಾನ್, ಕಾಂಗ್ರೆಸ್ ಸಮರ್ಥ ಆಡಳಿತವನ್ನು ನೀಡಲು ಶಕ್ತಿಯನ್ನು ಹೊಂದಿದೆ. ದೇಶದ ಇತಿಹಾಸದಲ್ಲಿಯೇ ಅತ್ಯಂತ್ಯ ಹಿರಿಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ರಾಜ್ಯದಲ್ಲಿ ಭ್ರಷ್ಟಚಾರವನ್ನು ನಡೆಸಿ ಜನರ ವಿಶ್ವಾಸವನ್ನು ಕಳೆದು ಕೊಂಡಿರುವ ಬಿಜೆಪಿಗೆ ಭವಿಷ್ಯವಿಲ್ಲ. ಮತದಾರರು ಸ್ಥಿರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕಿದೆ ಎಂದು ಹೇಳಿದರು. ಮಾಜಿ ಶಾಸಕ ಮುನಿನರಸಿಂಹಯ್ಯ, ಗ್ರಾಪಂ ಸದಸ್ಯ ಮೌಲಖಾನ್,ಕಾಂಗ್ರೆಸ್ ಹಿರಿಯ ಮುಖಂಡ ಷಬೀರ್ ಖಾನ್, ಅಪ್ಸಲ್, ಸಾಬೀರ್, ಮೌಲ, ನಸೀರ್, ಅಹ್ಮದ್ ಸೇರಿದಂತೆ ಹಲವಾರು ಹಾಜರಿದ್ದರು.