ಮಳೆ, ಗಾಳಿ: ಬಾಳೆ ಬೆಳೆ ನಷ್ಟ
ಗೌರಿಬಿದನೂರು: ಗೌರಿಬಿದನೂರು ತಾಲೂಕು ಗೊಟಕನಾಪುರ ಗ್ರಾಮದ ರೈತ ಮೋಹನ್ಕುಮಾರ್ ಎಂಬವರ ಸುಮಾರು ಒಂದೂವರೆ ಎಕರೆ ಬಾಳೆಯು ಮಂಗಳವಾರ ಬಿರುಗಾಳಿ ಮತ್ತು ಮಳೆ ಆರ್ಭಟಕ್ಕೆ ಸಿಲುಕಿ ನೆಲಕಚ್ಚಿದೆ. ಇದರಿಂದ ಸುಮಾರು ಒಂದೂವರೆ ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಮೋಹನ್ಕುಮಾರು ತಿಳಿಸಿದ್ದಾರೆ. ನಷ್ಟಕ್ಕೀಡಾದ ರೈತರ ಬೆಳೆಗೆ ಸರ್ಕಾರ ಸಮರ್ಪಕ ಪರಿಹಾರ ನೀಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.