ಸುಬ್ರಹ್ಮಣ್ಯಗೆ ಚಿನ್ನದ ಪದಕ
ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸರಿಗೆ ತಲೆನೋವಾಗಿದ್ದ ಹಾಗೂ ಬೆಮೆಲ್ ಕೃಷ್ಣಪ್ಪ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆತ್ತನೆಗೆರೆ ಸೀನನನ್ನು ಎನ್ಕೌಂಟರ್ನಲ್ಲಿ ಮುಗಿಸಿದ ಆಗಿನ ನಂದಗುಡಿ ಸಿಪಿಐ ಸುಬ್ರಹ್ಮಣ್ಯ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಲಬಿಸಿದೆ. ಹೊಸಕೋಟೆ ತಾಲೂಕಿನ ಸೂಲಿಬೆಲೆ ಸಮೀಪದ ನಂದಗುಡಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಅವರು ದಕ್ಷ ಅಧಿಕಾರಿಯಾಗಿದ್ದು, ಬೆತ್ತನಗೆರೆ ಸೀನನನ್ನು ಹಿಡಿಯಲು ಇಲಾಖೆ ನೇಮಿಸಿದ ತಂಡದಲ್ಲಿ ಕಾರ್ಯನಿರ್ವಹಿಸಿ ಸೀನನನ್ನು ಎನ್ಕೌಂಟರ್ನಲ್ಲಿ ಮುಗಿಸಿ ಜಿಲ್ಲೆ ಜನತೆಗೆ ನೆಮ್ಮದಿಯನ್ನು ತಂದುಕೊಟ್ಟಿದ್ದರು.ಇದಲ್ಲದೇ ನಂದಗುಡಿ ಸರ್ಕಲ್ ವ್ಯಾಪ್ತಿಗೆ ಒಳಪಡುವ ಸೂಲಿಬೆಲೆ ಪೊಲೀಸ್ ಠಾಣೆ ತೆನೆಯೂರಿನಲ್ಲಿ ಹಾಡಹಗಲೇ ರೌಡಿ ಬೋದಗೂರು ಮೋಹನ್ ಸುಫಾರಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಲ್ಲದೇ ನಂದಗುಡಿ ಸುತ್ತಮುತ್ತ ಫಿಲ್ಟರ್ ಮರಳು ಮಾಫಿಯಾದವರನ್ನು ಹೆಡಮುರಿ ಕಟ್ಟಿ ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದರು. ಇತ್ತೀಚಿಗೆ ಅವರ ಸೇವೆಯನ್ನು ಗಮನಿಸಿ ಸರ್ಕಾರ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ್ದು, ಪ್ರಸುತ್ತ ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿನ್ನದ ಪದಕ ಪಡೆದ ಇವರನ್ನು ಸೂಲಿಬೆಲೆ ಹಾಗೂ ನಂದಗುಡಿ ಪೊಲೀಸರು ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳ ಶವ ಪತ್ತೆ
ಮಾಗಡಿ: ಮಂಚನಬೆಲೆ ಜಲಾಶಯದಲ್ಲಿ ಮಂಗಳವಾರ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ಬುಧವಾರ ಪತ್ತೆಯಾಗಿದ್ದು, ಶವವನ್ನು ಹೊರತೆಗೆದು ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಿರುವುದಾಗಿ ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ. ರಘು(20), ಮಹೇಶ(20) ಇಬ್ಬರು ವಿದ್ಯಾರ್ಥಿಗಳು ರಾಜಾಜಿನಗರದ ಬಾಶ್ಯಂ ಸರ್ಕಲ್ನಲ್ಲಿರುವ ಎಂಇಐ ಕಾಲೇಜಿನ ವಿದ್ಯಾರ್ಥಿಗಳಾಗಳು.