ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಂಗ್ರೆಸ್ ಅಭ್ಯರ್ಥಿ ಗೆಲವಿಗೆ ಸಹಕರಿಸಿ

Rashmi Kasaragodu
Updated On : 5 Apr 2013, 1:01 am

ಸೂಲಿಬೆಲೆ: ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವಧಿಸುತ್ತಿರುವ ಎನ್. ನಾಗರಾಜ್ ಅವರ ಗೆಲವಿಗೆ ಸಹಕರಿಸುವಂತೆ ಸೂಲಿಬೆಲೆ ಹೋಬಳಿಯ ಕಾಂಗ್ರೆಸ್ ಎಸ್ಟಿ ಘಟಕ ಅಧ್ಯಕ್ಷ ವೆಂಕಟೇಶ್  ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಸೂಲಿಬೆಲೆ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊಸಕೋಟೆ ಕ್ಷೇತ್ರದ ಅಭಿವೃದ್ಧಿಗೆ ತನ್ನದೇ ಆದ ಕನಸುಗಳನ್ನು ಕಂಡಿರುವ ಎನ್.ನಾಗರಾಜ್ ಅವರನ್ನು ಈ ಬಾರಿ ಗೆಲ್ಲಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಕಳೆದ ಚುನಾವಣಿಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋತ ಇವರು, ಮತದಾರರು ಈ ಬಾರಿ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಇದಕ್ಕೆ ಪೂರಕವಾಗಿ ಕಾಯಕರ್ತರು ಕೆಲಸಮಾಡಬೇಕಿದೆ ಎಂದರು. ಗ್ರಾಪಂ ಸದಸ್ಯ ಎಸ್.ಕೆ ರಾಘವೇಂದ್ರ, ಶಫಿವುಲ್ಲಾ,ಬುಲೇಟ್ ಮುನಿರಾಜ್ ಸೇರಿದಂತೆ ಹಲವರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement