ಬೆಂಡಿಗಾನಹಳ್ಳಿಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಭೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ಸಚಿವ ಬಿ.ಎನ್. ಬಚ್ಚೇಗೌಡರ ಹುಟ್ಟೂರು ಬೆಂಡಿಗಾನಹಳ್ಳಿಯಲ್ಲಿ ಏ.5 ರಂದು ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸಭೆಯನ್ನು ಸಚಿವ ಬಿ.ಎನ್. ಬಚ್ಚೇಗೌಡ ಉದ್ಘಾಟನೆ ಮಾಡಲಿದ್ದು, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಮುನಿಯಪ್ಪ ಅಧ್ಯಕ್ಷಚೆ ವಹಿಸಲಿದ್ದಾರೆಯ ಹಿರಿಯ ಮುಖಂಡರಾದ ಬಿ.ಎನ್. ಗೋಪಾಲಗೌಡ, ಟಿ. ಸೊಣ್ಣಪ್ಪ, ಸಿ.ಮಂಜುನಾಥ್, ಬಿ.ವಿ ಸತೀಶ್‌ಗೌಡ ಸೇರಿದಂತೆ ಪಕ್ಷದ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಹೆತ್ತಕ್ಕಿಯಲ್ಲಿ ನಳದಯಂತಿ ಸ್ವಯಂವರ
ಸೂಲಿಬೆಲೆ : ಇಲ್ಲಿಗೆ ಸಮೀಪದ ನಂದಗುಡಿ ಹೋಬಳಿಯ ಹೆತ್ತಕ್ಕಿ ಗ್ರಾಮದಲ್ಲಿ ಏ.5 ರಂದು ನಳದಮಯಂತಿ ಸ್ವಯಂವರ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ. ನಾಟಕವನ್ನು ಸಚಿವ ಬಿ.ಎನ್. ಬಚ್ಚೇಗೌಡರು ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸೊಣ್ಣಪ್ಪ, ರಾಜಶೇಖರ್, ಗೋಪಾಲಗೌಡ, ಬೈರೇಗೌಡ, ಸವಿತಾ ಗೋಪಾಲ್, ಸಿ.ಮುನಿಯಪ್ಪ, ರಾಜಶೇಖರ್ ಗೌಡ, ಮುನಿಕಲ್ಲಪ್ಪ ಸೇರಿದಂತೆ ಆನೇಕ ಮುಖಂಡರು ಭಾವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಜೆಪಿ ಜಿಲ್ಲಾಧ್ಯಕ್ಷ ನಾಗರಾಜು ಅಧ್ಯಕ್ಷತೆಯಲ್ಲಿ ಸಭೆ
ಕನಕಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಭೆ ಕೆಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಆರ್.ನಾಗರಾಜು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕನಕಪುರ ತಾಲೂಕು ಕೆಜೆಪಿ ಪಕ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದು ಉತ್ತಮ ಆಡಳಿತ ನೀಡಿದ, ಯಾರೂ ಊಹಿಸದ ವಿವಿಧ ರೀತಿಯ ಸವಲತ್ತುಗಳನ್ನು ಜನರಿಗೆ ಒದಗಿಸಿದ ಯಡಿಯೂರಪ್ಪನವರು ಪಕ್ಷದ ಆಂತರಿಕ ಭಿನ್ನಮತ, ಕಿರುಕುಳಗಳಿಂದ ಬೇಸತ್ತು ನೂತನ ಪಕ್ಷ ಕಟ್ಟಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಕಂಡ ಜನತೆ ಚುನಾವಣೆಯಲ್ಲಿ ಕೆಜೆಪಿಯನ್ನು ಬೆಂಬಲಿಸಬೇಕೆಂದು ಕರೆ ನೀಡಿದರು. ಕನಕಪುರ ತಾಲೂಕು ಕೆಜೆಪಿ ಪಕ್ಷದ ಅಧ್ಯಕ್ಷರಾಗಿ ಸಿ.ವಿ. ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಚೀರಣಕುಪ್ಪೆ ರಾಜೇಶ್, ಮಂಜುನಾಥರಾವ್, ನಗರಾಧ್ಯಕ್ಷರಾಗಿ ಗೋವಿಂದ, ಯುವಮೋರ್ಚಾ ಅಧ್ಯಕ್ಷರಾಗಿ ಮಹದೇಶ್‌ಬಾಬು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಫೈರೋಜ್ ಆಯ್ಕೆಗೊಂಡರು.