ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾದಿಗ ಜನಾಂಗಕ್ಕೆ ರಾಜಕೀಯ ಪಕ್ಷಗಳು ಅವಕಾಶ ನೀಡಲೇಬೇಕು

Rashmi Kasaragodu
Updated On : 5 Apr 2013, 1:00 am

ಕ.ಪ್ರ. ವಾರ್ತೆ   ದೇವನಹಳ್ಳಿ   ಏ.4
ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಹಲವಾರು ವರ್ಷಗಳಿಂದಲೂ ವಿಧಾನಸಭಾ ಚುನಾವಣೆಯಲ್ಲಿ ಮೀಸಲು ಸ್ಥಾನವಿದ್ದರೂ  ಯಾವುದೇ ರಾಜಕೀಯ ಪಕ್ಷಗಳು ಮಾದಿಗ ಜನಾಂಗಕ್ಕೆ ಅವಕಾಶ ನೀಡದೇ ಉಳಿದ  ಜನಾಂಗದವರಿಗೆ ಅವಕಾಶ ನೀಡುತ್ತಿವೆ ಎಂದು ತಾಲೂಕು ಮಾದಿಗ ಜನಾಂಗದ ಒಕ್ಕೂಟ ಸಂಸ್ಥೆಗಳು ಆರೋಪಿಸಿವೆ.
ದೇವನಹಳ್ಳಿ ತಾಲೂಕಿನಲ್ಲಿ  60 ಸಾವಿರಕ್ಕೂ ಹೆಚ್ಚು ಮಾದಿಗ ಜನಾಂಗದ ಮತದಾರರಿದ್ದು ಇದುವರೆಗೂ ಯಾವುದೇ ರಾಜಕೀಯ ಪ್ರಮುಖ ಪಕ್ಷಗಳು ರಾಜಕೀಯ ಸ್ಥಾನ ಮಾನ ನೀಡುವಲ್ಲಿ ವಿಫಲವಾಗಿವೆ ಎಂದು ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ ತಿಳಿಸಿದ್ದಾರೆ.
 ಮಾದಿಗ ಜನಾಂಗವನ್ನು ಕೇವಲ ತಮಟೆ ಬಾರಿಸಲು, ಹೆಣ ಹೂಳಲು ರಸ್ತೆ ಚರಂಡಿ ಗುಡಿಸಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಜನಾಂಗ ರಾಜಕೀಯವಾಗಿ ಅವಕಾಶ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
 ದೇವನಹಳ್ಳಿ ತಾಲೂಕಿನಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದ ಮಾದಿಗ ಜನಾಂಗವಿದೆ. ಯಾವುದೇ ರಾಜಕೀಯ ಪ್ರಮುಖ ಪಕ್ಷಗಳು ಮಾದಿಗ ಜನಾಂಗಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ಇದ್ದಲ್ಲಿ  ಮಾದಿಗ ಸಂಘಟನೆಗಳು ಒಗ್ಗಟ್ಟಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ಮಾದಿಗ ದಂಡೋರ ಸಮನ್ವಯ ಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ತಾಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಮಾರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಂ.ನಾರಾಯಣಸ್ವಾಮಿ, ಚಂದೇನಹಳ್ಳಿ ಮುನಿಯಪ್ಪ, ಜೆಡಿಎಸ್ ನಲ್ಲಿ ಪಿಳ್ಳಮುನಿಶಾಮಪ್ಪ ಹಾಗೂ ಬಿಜೆಪಿಯಲ್ಲಿ ಡಿ.ಆರ್. ನಾರಾಯಣಸ್ವಾಮಿ ಆಕಾಂಕ್ಷಿಗಳಾಗಿದ್ದು ಇವರಲ್ಲಿ ಯಾರಿಗಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಳ ನೀಡಲೇಬೇಕು ಎಂದು ಶ್ರೀನಿವಾಸ್ ತಿಳಿಸಿ  ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ, ಹಾಗೂ ಶಾಸಕ ವೆಂಕಟಸ್ವಾಮಿ ಅವರು ನ್ಯಾ. ಎ.ಜೆ. ಸದಾಶಿವ ವರದಿಯ ವಿರೋಧಿಗಳಾಗಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement