ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಗಂಗಾಧರ್

Rashmi Kasaragodu
Updated On : 5 Apr 2013, 1:01 am

ಕ.ಪ್ರ. ವಾರ್ತೆ   ನೆಲಮಂಗಲ   ಏ.4
ವಿದ್ಯಾರ್ಥಿ ಜೀವನದಲ್ಲಿರುವಾಗಲೇ ಸರ್ಕಾರದ ಸೌಲಭ್ಯ ಹಾಗೂ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಅರಿವು ಮೂಡಿಸಿಕೊಳ್ಳಬೇಕು ಎಂದು ವಕೀಲ ಬಿ.ಪಿ.ಗಂಗಾಧರ್ ಹೇಳಿದರು.
ಅವರು ಗುರುವಾರ ಪಟ್ಟಣದ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಪುರಸಭೆ ಹಾಗೂ ಶ್ರೀಮತಿ ಮುನಿಯಮ್ಮ ಓಬಳಯ್ಯ ವಿದ್ಯಾವಾಹಿನಿ ಸಂಸ್ಥೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಶಿಬಿರದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ  ವಿದ್ಯಾಭ್ಯಾಸದ ಜೊತೆ ಜೊತೆ ಕಾನೂನು ಅರಿತಾಗ ಮುಂದೆ ಅನುಕೂಲವಾಗುತ್ತದೆ. ಇ.ಎಸ್.ಐ ಹಾಗೂ ಪಿ.ಎಫ್‌ಗಳನ್ನು ಪಡೆಯುವ ಕ್ರಮ ಅದರ ಉಪಯೋಗಗಳನ್ನು ಈ ಸಂದರ್ಭದಲ್ಲಿ ಅವರು ತಿಳಿಸಿದರು.
ಸಮಾಜದಲ್ಲಿ ಬದುಕುವ ನಾವು ಸಾಕಷ್ಟು ಕಾನೂನು ಸಾಧಕ ಬಾಧಕಗಳ ನಡುವೆ ಹೋರಾಟ ನಡೆಸುವ ಸ್ಥಿತಿ ಬರುವುದರಿಂದ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯ. ಕಾನೂನು  ನಮ್ಮನ್ನು ಮುಕ್ತವಾಗಿ ಜೀವನ ಸಾಗಿಸುವುದಕ್ಕೆ ದಾರಿ ನೀಡುತ್ತದೆ ಎಂದು ವಕೀಲ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕೆ.ಓ.ಮಹೇಶ್, ಪ್ರಾಂಶುಪಾಲ ಆರಾಧ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement