ಅಪಘಾತ: ವ್ಯಕ್ತಿ ಸಾವು
ಸೂಲಿಬೆಲೆ: ಇಲ್ಲಿಗೆ ಸಮೀಪದ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಖಾಸಗಿ ಬಸ್ ಹಾಗೂ ದ್ವಿ ಚಕ್ರವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ, ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ನಿವಾಸಿ ಜಿ.ಸುಬ್ಬಾರೆಡ್ಡಿ (33) ಮೃತ ವ್ಯಕ್ತಿ.
ಪಿಲ್ಲಗುಂಪೆ ಕೈಗಾರಿಕೆ ಪ್ರದೇಶದಲ್ಲಿರುವ ಟಿಟಿಕೆ ಕಾರ್ಖಾನೆಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸುಬ್ಬಾರೆಡ್ಡಿ ದ್ವಿಚಕ್ರವಾಹನದಲ್ಲಿ ದಕ್ಷಿಣ ಪೌಂಡ್ರಿ ಕಾರ್ಖಾನೆ ಬಳಿ ಬರುತ್ತಿರುವಾಗ ಎದುರೆಗ ಬಂದ ಖಾಸಾಗಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಸುಬ್ಬಾರೆಡ್ಡಿ ಬಸ್ ಮುಂಭಾಗದ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.